ಕೆಜಿಎಫ್​ ದಾಖಲೆ ಪುಡಿಗಟ್ಟಿದ ‘ಜೇಮ್ಸ್​’ನಿಂದ ಮತ್ತೊಂದು ದಾಖಲೆ!

masthmagaa.com:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಮೊದಲ ದಿನದ ಬಾಕ್ಸ್ ಆಫೀಸ್‌ ಗಳಿಕೆಯಲ್ಲಿ ಕೆಜಿಎಫ್ ದಾಖಲೆಯನ್ನ ಮುರಿದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜೊತೆಗೆ, ಇದು ಪುನೀತ್ ರಾಜ್‌ಕುಮಾರ್ ಸಿನಿ ಕರಿಯರ್ ನಲ್ಲಿಯೇ ಮೊದಲ ದಿನ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಮೊದಲ ದಿನ 12.5 ಕೋಟಿ ಗಳಿಸಿತ್ತು. ಆದರೆ ಜೇಮ್ಸ್ 15 ಕೋಟಿ ಗಳಿಸಿದೆ ಅಂತ ಹೆಳಲಾಗ್ತಿದೆ. ಇದಲ್ಲದೆ ವಿವಿಧ ಭಾಷೆಗಳ ಡಿಜಿಟಲ್, ಟಿವಿ ರೈಟ್ಸ್ ಮತ್ತೆ ಎರಡನೇ ದಿನದ ಥಿಯೇಟ್ರಿಕಲ್ ಕಲೆಕ್ಷನ್ ಸೇರಿ ಎರಡನೇ ದಿನದ ಅಂತ್ಯಕ್ಕೆ 100 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ನಿರ್ಮಾಪಕ ಕಿಶೋರ್ ಅಂದಾಜಿಸಿದ್ದಾರೆ.

-masthmagaa.com

Contact Us for Advertisement

Leave a Reply