ಬಾಯ್‌ಫ್ರೆಂಡ್‌ ಜೊತೆ ತಿಮ್ಮಪ್ಪನ ದರ್ಶನ ಪಡೆದ ಜಾನ್ವಿ ಕಪೂರ್‌!

masthmagaa.com:

ಬಾಲಿವುಡ್ ನಟಿ ಜಾನ್ವಿ ಕಪೂರ್ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸಬೇಕು ಎಂದು ಕನಸು ಕಂಡಿದ್ದರು. ಅದರಂತೆ ಈಗ ಕೊನೆಗೂ ಸೌತ್ ಸಿನಿಮಾದಲ್ಲಿ ಜೂ. ಎನ್. ಟಿ. ಆರ್‌. ಜೊತೆ ನಟಿಸುತ್ತಿದ್ದಾರೆ. ತೆಲುಗು ಸಿನಿಮಾ ಶೂಟಿಂಗ್‌ಗೂ ಮೊದಲು ಜಾನ್ವಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಗ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಯ್​ಫ್ರೆಂಡ್ ಶಿಖರ್ ಪಹರಿಯಾ ಜೊತೆ ಹೆಚ್ಚು ಸುತ್ತಾಟ ನಡೆಸುತ್ತಿದ್ದಾರೆ. ಅಂದಹಾಗೆ ಇಬ್ಬರೂ ಈ ಮೊದಲು ಸಹ ಪ್ರೀತಿಯಲ್ಲಿದ್ದರು. ಆದರೆ ಬ್ರೇಕಪ್ ಮಾಡಿಕೊಂಡು ದೂರ ದೂರ ಆಗಿದ್ದರು. ಇದೀಗ ಇಬ್ಬರೂ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ನಡೆದ ನೀತಾ ಅಂಬಾನಿ ಅವರ ಕಾರ್ಯಕ್ರಮದಲ್ಲೂ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು.

-masthmagaa.com

Contact Us for Advertisement

Leave a Reply