ಜಪಾನ್​​ನಲ್ಲೂ ಹಕ್ಕಿಜ್ವರ ಸ್ಫೋಟ! ಆತಂಕದಲ್ಲಿ ಜನ

masthmagaa.com:

ದೇಶದಲ್ಲಿ ಮೂರನೇ ಬಾರಿಗೆ ಹಕ್ಕಿಜ್ವರ ಸ್ಫೋಟಗೊಂಡಿದೆ ಅಂತ ಜಪಾನ್ ದೃಢಪಡಿಸಿದೆ. ಇಲ್ಲಿನ ಕೋಳಿ ಫಾರಂ ಒಂದ್ರಲ್ಲಿ ತುಂಬಾ ಸಾಂಕ್ರಾಮಿಕವಾದ ಹೆಚ್​​​​​​​​​5ಎನ್​​​​​8 ಸೋಂಕು ಪತ್ತೆಯಾಗಿದೆ. ಕಾಗೋಶಿಮಾ ಪ್ರಾಂತ್ಯದ ಇಝಮಿ ನಗರದಲ್ಲಿ ಸುಮಾರು 11 ಸಾವಿರ ಮೊಟ್ಟೆ ಇಡುವ ಕೋಳಿಗಳಿರೋ ಫಾರಂನಲ್ಲಿ ಏಕಾಏಕಿ ಸೋಂಕು ಪತ್ತೆಯಾಗಿದೆ ಅಂತ ಜಪಾನ್​​ನ ಕೃಷಿ ಸಚಿವಾಲಯ ಮಾಹಿತಿ ನೀಡಿದೆ. ಇತ್ತೀಚೆಗಷ್ಟೇ ಯೂರೋಪ್​ ಮತ್ತು ಏಷ್ಯಾದ ಕೆಲ ದೇಶಗಳಲ್ಲಿ ಈ ಹಕ್ಕಿಜ್ವರ ಪತ್ತೆಯಾಗ್ತಿದೆ ಅಂತ ವರದಿಯಾಗಿತ್ತು. ಅದ್ರ ಬೆನ್ನಲ್ಲೇ ಜಪಾನ್​​ನಲ್ಲಿ ಪತ್ತೆಯಾಗಿರೋ ಕಾಯಿಲೆ ವೇಗವಾಗಿ ಹರಡುತ್ತಿದೆ ಅನ್ನೋದನ್ನ ಸೂಚಿಸುತ್ತೆ ಅಂತ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply