ಜಪಾನ್:‌ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡುವ ವಯಸ್ಸು 13 ರಿಂದ 16ಕ್ಕೆ ಏರಿಕೆ

masthmagaa.com:

ಲೈಂಗಿಕ ಅಪರಾಧಕ್ಕೆ ಸಂಬಂಧಿಸಿದ ಪ್ರಮುಖ ಬಿಲ್‌ವೊಂದನ್ನ ಜಪಾನ್‌ ಪಾಸ್‌ ಮಾಡಿದೆ. ಅತ್ಯಾಚಾರ, ಲೈಂಗಿಕ ಸಂಬಂಧದ ಫೋಟೋ ಅಥ್ವಾ ವಿಡಿಯೋ ಮಾಡಿ ಬಳಿಕ ಬ್ಲ್ಯಾಕ್‌ ಮೇಲ್‌ ಮಾಡೋದು ಹಾಗೂ ಆನ್‌ಲೈನ್‌ನಲ್ಲಿ ಮಕ್ಕಳಿಗೆ ಕಿರುಕುಳ ಕೊಡೊದು ಹೀಗೆ ಅನೇಕ ಅಪರಾಧಗಳಿಗೆ ಈಸಿಯಾಗಿ ಶಿಕ್ಷೆ ಕೊಡುವ ಬಿಲ್‌ ಇದಾಗಿದೆ. ಅಲ್ದೇ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡುವ ವಯಸ್ಸನ್ನ 13 ರಿಂದ 16ಕ್ಕೆ ಏರಿಸಲಾಗಿದೆ. ಅಂದ್ಹಾಗೆ 1907ರಿಂದ ಈ ವಯಸ್ಸಿನಲ್ಲಿ ಯಾವುದೇ ಬದಲಾವಣೆ ಮಾಡಿದ್ದಿಲ್ಲ. 2022ರಲ್ಲಿ 150ಕ್ಕೂ ಅಧಿಕ ಮಕ್ಕಳು ಗಂಭೀರ ಅಪರಾಧಗಳಿಗೆ ಬಲಿಯಾಗಿದ್ರು. ಅಲ್ದೇ 1330 ಜನರ ಮೇಲೆ ಅತ್ಯಾಚಾರ ಕೇಸ್‌ ದಾಖಲಾಗಿದ್ದು, ಕೇವಲ 455 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಹೀಗಾಗಿ ಈ ಬಿಲ್‌ ತರೋದು ಜಪಾನ್‌ಗೆ ಅವಶ್ಯಕವಾಗಿತ್ತು. ಇದೀಗ ಬಿಲ್‌ ಪಾಸ್‌ ಆಗಿದ್ದು, ಇನ್ನೇನು ಕಾನೂನಾಗಿ ಜಾರಿಯಾಗಬೇಕಿದೆ.

-masthmagaa.com

Contact Us for Advertisement

Leave a Reply