ಜಪಾನ್ ಪ್ರಧಾನಿ ರಾಜಿನಾಮೆ! ಸುಗಾ ಮನೆಗೆ., ಈಗ ಮಣೆ ಯಾರಿಗೆ?

masthmagaa.com:

ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ರಾಜಿನಾಮೆ ಘೋಷಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಶಿನ್ಜೋ ಅಬೆ ರಾಜಿನಾಮೆ ಬಳಿಕ 71ನೇ ವಯಸ್ಸಿನಲ್ಲಿ ಯೋಶಿಹಿದೆ ಸುಗಾ ಅಧಿಕಾರಕ್ಕೇರಿದ್ದರು. ಒಬ್ಬ ರೈತನ ಮಗ ಜಪಾನ್ ಪ್ರಧಾನಿಯಾದರು ಅಂತ ವಿಶ್ವಾದ್ಯಂತ ಸುದ್ದಿಯಾಗಿತ್ತು. ಆದ್ರೆ ಕೊರೋನ ನಿರ್ವಹಣೆ, ವೈಯಕ್ತಿಕ ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು ಎಲ್ಲಾ ಸೇರಿ ಅವರ ಸಪೋರ್ಟ್ ರೇಟಿಂಗ್ ಬಿದ್ದುಹೋಗಿತ್ತು. ಬರೀ 30 ಪರ್ಸೆಂಟ್ ಜನ ಸುಗಾ ಪರ ಅಭಿಪ್ರಾಯ ನೀಡಿದ್ದರು. ಹೀಗಾಗಿ ಈಗ ಅವರ ಲಿಬರಲ್ ಡೆಮಾಕ್ರಾಟಿಕ್ ಪಕ್ಷ ಹೊಸ ನಾಯಕನ ಆಯ್ಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಸುಗಾ ಮನೆಗೆ., ಈಗ ಮಣೆ ಯಾರಿಗೆ ಅನ್ನೋ ಪ್ರಶ್ನೆ ಜಪಾನ್ ನಲ್ಲಿ ಜೋರಾಗಿದೆ. ಇದೇ ವರ್ಷ ಜಪಾನ್ ನಲ್ಲಿ ಎಲೆಕ್ಷನ್ ಕೂಡ ಇದೆ. ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೋ ಕಿಶಿದಾ ಹಾಗೂ ಆಡಳಿತ ಸುಧಾರಣಾ ಸಚಿವ ತಾರಾ ಕೋನೋ ಸೇರಿ ಹಲವರು ಮುಂದಿನ ಪ್ರಧಾನಿಯಾಗಲು ರೇಸ್ ನಲ್ಲಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply