ಜವಾನ್‌ಗೋಸ್ಕರ ಶಾರುಖ್‌ ಟೆಂಪಲ್‌ ರನ್‌ !

masthmagaa.com:

ಶಾರುಖ್‌ ಖಾನ್‌ ಅಭಿನಯದ ಜವಾನ್‌ ಮೂವಿ ರಿಲೀಸ್‌ಗೆ ಇನ್ನೂ ಕೇವಲ 2 ದಿನ ಮಾತ್ರ ಬಾಕಿ ಇದೆ. ಈಗಾಗಲೇ ಟಿಕೆಟ್ ಖರೀದಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಬಾಕ್ಸ್‌ ಆಫಿಸ್‌ನಲ್ಲಿ ಒಳ್ಳೆ ಕಲೆಕ್ಷನ್‌ ಮಾಡೋ ಎಲ್ಲಾ ಲಕ್ಷಣಗಳು ಸಹ ಇದೆ. ಶಾರುಖ್‌ ಖಾನ್‌ ಕೂಡ ಚಿತ್ರಕ್ಕೋಸ್ಕರ ಸಿಕ್ಕಾಪಟ್ಟೆ ಪ್ರಮೋಷನ್‌ ಮಾಡ್ತಾ ಇದ್ದಾರೆ. ಇದೀಗ ತಿರುಪತಿಗೆ ಶಾರುಖ್‌ ಖಾನ್‌ ಟೀಮ್‌ ಬಂದಿದೆ.

ಇತ್ತೀಚಿಗಷ್ಟೇ ವೈಷ್ಣೋದೇವಿ ದೇವಾಲಯಕ್ಕೆ ಶಾರುಖ್ & ಟೀಂ ಭೇಟಿ ಕೊಟ್ಟಿದ್ರು. ನಂತರ ಈಗ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನವನ್ನ ಶಾರುಖ್‌ ಖಾನ್‌, ನಯನತಾರಾ, ಮತ್ತು ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್ ಕೂಡ ಪಡೆದಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ವಿಶೇಷ ಪೂಜೆಯನ್ನೂ ಸಹ ಮಾಡಿಸಿದ್ದಾರೆ.

https://www.instagram.com/reel/CwzErmNL7NZ/?utm_source=ig_web_copy_link

ಶಾರುಖ್‌ ಖಾನ್‌ ಅವರ ಟೆಂಪಲ್‌ ರನ್‌ ಲುಕ್‌ ಅಭಿಮಾನಿಗಳಿಗೆ ತುಂಬಾನೇ ಇಷ್ಟ ಆಗಿದೆ. ಬಿಳಿ ಪಂಚೆ, ಶಲ್ಯದಲ್ಲಿ ಶಾರುಖ್‌ ಖಾನ್‌ ಮಿಂಚಿದ್ದಾರೆ.

-masthmagaa.com

Contact Us for Advertisement

Leave a Reply