ಜೆಡಿಎಸ್‌ ಬಿಟ್ಟು ಹೋಗಲ್ಲ ಅಂತ ಮುಖಂಡರಿಂದ ಪ್ರಮಾಣ ಮಾಡಿಸಿದ HDK!

masthmagaa.com:

ಕಮಲ-ದಳ ದೋಸ್ತಿ ಬೆನ್ನಲ್ಲೆ JDSನಲ್ಲಿ ಅಸಮಾಧಾನದ ಹೊಗೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಈಗ ಅತೃಪ್ತಿಯ ಕಿಚ್ಚನ್ನ ತಣಿಸಲು ಖುದ್ದು ಹೆಚ್‌ಡಿಕೆ ಅಖಾಡಕ್ಕಿಳಿದ್ದಾರೆ. ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸಭೆ ನಡೆಸಿದ್ದಾರೆ. ಅತೃಪ್ತ ನಾಯಕರು ಗೈರಾಗಿದ್ದರೂ ಇದ್ದ ನಾಯಕರಿಗೇ ಹೆಚ್‌ಡಿಕೆ ನೀತಿ ಪಾಠ ಮಾಡಿದ್ದಾರೆ. ಪಕ್ಷಬಿಟ್ಟು ಹೋಗದಂತೆ ಪ್ರಮಾಣ ಮಾಡಿಸಿದ್ದಾರೆ. ಸಭೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯತೆ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಈ ವೇಳೆ ‘ತಾಯಿ ಸಮಾನವಾದ ಪಕ್ಷಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಬಗೆಯುವುದಿಲ್ಲ’ ಅಂತ ಸಾಮೂಹಿಕವಾಗಿ ಪ್ರಮಾಣ ಮಾಡಿಸಲಾಗಿದೆ. ಬಳಿಕ ‘ಬಿಜೆಪಿ ಜತೆ ಮೈತ್ರಿ ಕುರಿತಂತೆ ದೇವೇಗೌಡ ಮತ್ತು ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ. ಎಲ್ಲರೂ ಒಗ್ಗಟ್ಟಾಗಿ ಮುಂದಿನ ಚುನಾವಣೆ ಎದುರಿಸುತ್ತೇವೆ’ ಅಂತ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಅನೌನ್ಸ್‌ ಮಾಡಿದ್ದಾರೆ. ಈ ಸಭೆಯಲ್ಲಿ ಮಾತಾಡಿರುವ ಕುಮಾರಸ್ವಾಮಿ, ಮತಕ್ಕಾಗಿ ಯಾವುದೇ ಒಂದು ಸಮುದಾಯವನ್ನು ಓಲೈಕೆ ಮಾಡಲಾರೆ. ಮುಸ್ಲಿಮರಿಗೆ ನಾನು ಅನ್ಯಾಯ ಮಾಡಿಲ್ಲ. ಯಾವ ಸಮುದಾಯವನ್ನು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ನನ್ನ ಬದ್ಧತೆ ಬಗ್ಗೆ ಆ ಸಮುದಾಯದವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ರೀತಿ ನಾನು ಪೊಳ್ಳು ಭರವಸೆ ನೀಡಲಾರೆ’ ಅಂತ ಹೇಳಿದ್ದಾರೆ. ಇತ್ತ ಮೈತ್ರಿ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್‌ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಈ ಸಭೆಯಿಂದಲೂ ದೂರ ಉಳಿದಿದ್ದಾರೆ.

-masthmagaa.com

Contact Us for Advertisement

Leave a Reply