JEE Advanced ಪರೀಕ್ಷೆ ದಿನಾಂಕ ಘೋಷಣೆ.. ಈ ಸಲ 75% ಎಲಿಜಿಬಿಲಿಟಿ ಕ್ರೈಟಿರಿಯಾ ಇಲ್ಲ

masthmagaa.com:

JEE ಅಡ್ವಾನ್ಸ್ ಪರೀಕ್ಷೆ ಜುಲೈ 3ರಂದು ನಡೆಯಲಿದೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಈ ಸ್ಪರ್ಧಾತ್ಮಕ ಪರೀಕ್ಷೆಯನ್ನ ಐಐಟಿ ಖಾರಗ್​ಪುರ್ ಆಯೋಜಿಸಲಿದೆ. ಇನ್ನು ಹಿಂದಿನ ವರ್ಷಗಳಲ್ಲಿ ದೇಶದ 23 ಐಐಟಿಗಳಲ್ಲಿ ಅಡ್ಮಿಷನ್ ಪಡೀಬೇಕು ಅಂದ್ರೆ JEE ಅಡ್ವಾನ್ಸ್ ಪರೀಕ್ಷೆಯನ್ನ ಪಾಸ್ ಆಗೋದ್ರ ಜೊತೆಗೆ 12ನೇ ತರಗತಿಯಲ್ಲಿ 75 ಪರ್ಸೆಂಟ್​ಗಿಂತ ಹೆಚ್ಚು ಅಂಕ ಪಡೆದಿರಬೇಕಿತ್ತು ಅಥವಾ ಬೋರ್ಡ್​ ಎಕ್ಸಾಂನಲ್ಲಿ ಅಗ್ರ 20 ಪರ್ಸೆಂಟ್​ನಲ್ಲಿ ಸ್ಥಾನ ಪಡೆದಿರಬೇಕಿತ್ತು. ಆದ್ರೆ ಈ ಬಾರಿ 12ನೇ ತರಗತಿಯಲ್ಲಿ 75%ಗಿಂತ ಹೆಚ್ಚು ಅಂಕ ಪಡೆದಿರಬೇಕು ಎಂಬ ಅರ್ಹತಾ ಮಾನದಂಡವನ್ನ ಕೊರೋನಾ ಕಾರಣದಿಂದಾಗಿ ರದ್ದು ಪಡಿಸಲಾಗಿದೆ ಅಂತ ಸಚಿವರು ಹೇಳಿದ್ರು.

ಇತ್ತೀಚೆಗಷ್ಟೇ JEE ಮೈನ್ಸ್ ಎಕ್ಸಾಂನ ಡೇಟ್ ಅನ್ನು ಕೇಂದ್ರ ಸರ್ಕಾರ ಅನೌನ್ಸ್ ಮಾಡಿತ್ತು. ಫೆಬ್ರವರಿ 23-26, ಮಾರ್ಚ್ 15-18, ಏಪ್ರಿಲ್ 27-30 ಮತ್ತು ಮೇ 24-28ರಂದು ಒಟ್ಟು 4 ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತೆ ಅಂತ ಹೇಳಿತ್ತು. ಇದೀಗ JEE ಅಡ್ವಾನ್ಸ್ ಪರೀಕ್ಷೆಯ ಡೇಟ್ ಕೂಡ ಅನೌನ್ಸ್ ಆಗಿದೆ.

-masthmagaa.com

Contact Us for Advertisement

Leave a Reply