ಆ ಸಂಸ್ಥೆಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ದಾನ ಮಾಡಿದ್ಯಾಕೆ ಬೆಜೋಸ್​?

masthmagaa.com:

ಅಮೆಜಾನ್ ಮತ್ತು ಬ್ಲೂ ಒರಿಜಿನ್ ಸಂಸ್ಥಾಪಕ ಜೆಫ್ ಬೆಜೋಸ್ ಸ್ಮಿತ್ ಸೋನಿಯನ್ ಅನ್ನೋ ರಿಸರ್ಚ್​ ಸೆಂಟರ್​​​​​​ಗೆ 20 ಕೋಟಿ ಡಾಲರ್​ ಅಂದ್ರೆ 1,480 ಕೋಟಿ ರೂಪಾಯಿ ದಾನ ಮಾಡಲು ನಿರ್ಧರಿಸಿದ್ದಾರೆ. 1846ರಲ್ಲಿ ಸ್ಥಾಪನೆಯಾಗಿದ್ದ ಈ ಸಂಸ್ಥೆ ದಾನಿಗಳು ಮತ್ತು ಅಮೆರಿಕ ಸರ್ಕಾರ ಎರಡರಿಂದಲೂ ಅನುದಾನ ಪಡೆದುಕೊಂಡು ಬಂದಿದೆ. ಆದ್ರೆ 20 ಕೋಟಿ ಡಾಲರ್​​ ದಾನ ಒಂದೇ ಬಾರಿಗೆ ಸಿಕ್ಕಿರೋದು ಇದೇ ಮೊದಲು. ಈ ಸಂಸ್ಥೆಯ ನ್ಯಾಷನಲ್ ಏರ್​​​ & ಸ್ಪೇಸ್​ ಮ್ಯೂಸಿಯಂ ನವೀಕರಣಕ್ಕೆ 7 ಕೋಟಿ ಡಾಲರ್ ಮತ್ತು ಉಳಿದ 13 ಕೋಟಿ ಡಾಲರ್​​ನ್ನು ಹೊಸ ಶಿಕ್ಷಣ ಕೇಂದ್ರ ಸ್ಥಾಪನೆಗಾಗಿ ದಾನ ಮಾಡಲು ನಿರ್ಧರಿಸಿದ್ದಾರೆ. ಈ ಶಿಕ್ಷಣ ಕೇಂದ್ರದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್​​​​​, ಕಲೆ ಮತ್ತು ಗಣಿತಶಾಸ್ತ್ರವನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಉದ್ದೇಶ ಹೊಂದಲಾಗಿದೆ. ಅಂದಹಾಗೆ ಇದೇ ಜುಲೈ 20ರಂದು ಜೆಫ್ ಬೆಜೋಸ್​ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

-masthmagaa.com

Contact Us for Advertisement

Leave a Reply