ಚಂಪೈ ಸೊರೇನ್‌ ವಿಶ್ವಾಸ ಸಾಬೀತಿ, ED ವಿರುದ್ಧ ಹೇಮಂತ್‌ ಸೊರೇನ್‌ ಕೇಸ್!

masthmagaa.com:

ಜಾರ್ಖಂಡ್‌ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್‌, ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಿದ್ದಾರೆ. ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ 47 ಶಾಸಕರು ಕೈ ಎತ್ತೋ ಮೂಲಕ ಬೆಂಬಲ ಸೂಚಿಸಿದ್ದಾರೆ. 29 ಶಾಸಕರು ವಿಶ್ವಾಸಮತದ ವಿರುದ್ಧ ಕೈಯೆತ್ತಿದ್ದಾರೆ. ಇನ್ನು ವಿಶ್ವಾಸಮತಕ್ಕಾಗಿ ವಿಧಾನಸಭೆಯಲ್ಲಿ ಹಾಜರಿದ್ದ ಮಾಜಿ ಸಿಎಂ ಹೇಮಂತ್‌ ಸೋರೇನ್‌, ತಾವು ಬಂಧನ ಆಗಿದ್ರಲ್ಲಿ ರಾಜಭವನದ ಕೈವಾಡ ಇದೆ. ಭ್ರಷ್ಟಾಚಾರ ಆರೋಪ ಸಾಬೀತಾದ್ರೆ ರಾಜಕಾರಣ ಬಿಡ್ತೀನಿ ಅಂದಿದ್ದಾರೆ. ಇನ್ನು ಸೊರೇನ್‌, ED ತಮಗೆ ಹಾಗೂ ತಮ್ಮ ಸಮುದಾಯಕ್ಕೆ ಕಿರುಕುಳ ನೀಡಿದೆ ಅಂತ SC/SC ಕಾಯ್ದೆಯಡಿ‌ ಕೇಸ್‌ ಹಾಕಿದ್ದಾರೆ. ರಾಂಚಿಯ SC/SC ಪೊಲೀಸ್‌ ಠಾಣೆಯಲ್ಲಿ ಈ ಕೇಸ್‌ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ED ಜಾರ್ಖಂಡ್‌ ಹೈಕೋರ್ಟ್‌ ಮೆಟ್ಟಿಲೇರಿದೆ.

-masthmagaa.com

Contact Us for Advertisement

Leave a Reply