ಮೋದಿ-ಬೈಡೆನ್ ಫೋನ್​ ಕಾಲ್​: ಕೊರೋನಾ ವಿಚಾರದಲ್ಲಿ ಅಮೆರಿಕ ಸಪೋರ್ಟ್

masthmagaa.com:

ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುಗಳನ್ನ ರಫ್ತು ಮಾಡಲು ಅಮೆರಿಕ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಎರಡೂ ದೇಶದಲ್ಲಿನ ಕೊರೋನಾ ಪರಿಸ್ಥಿತಿಯನ್ನ ವಿವರವಾಗಿ ಚರ್ಚೆ ನಡೆಸಿದ್ದಾಗಿ, ಭಾರತಕ್ಕೆ ಅಮೆರಿಕ ನೀಡಿದ ಬೆಂಬಲಕ್ಕೆ ಧನ್ಯವಾದ ಸೂಚಿಸಿದ್ದಾಗಿಯೂ ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಜೊತೆಗೆ ಕೊರೋನಾ ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳನ್ನ ಪೂರೈಸೋ ಬಗ್ಗೆಯೂ ಚರ್ಚಿಸಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಭಾರತ-ಅಮೆರಿಕ ನಡುವಿನ ಪಾರ್ಟ್​​ನರ್​ಶಿಪ್ ಜಾಗತಿಕ ಕೊರೋನಾ ಚಾಲೆಂಜ್ ಎದುರಿಸಲು ಸಮರ್ಥವಾಗಿದೆ ಅಂತಾನೂ ಪ್ರಧಾನಿ ಮೋದಿ ಹೇಳಿದ್ದಾರೆ. ಉಭಯ ದೇಶಗಳ ನಾಯಕರ ನಡುವಿನ ಮಾತುಕತೆ ಬೆನ್ನಲ್ಲೇ ಅಮೆರಿಕ ಭಾರತಕ್ಕೆ ಸ್ಟ್ರೈಕ್​ ಟೀಂ ಕಳಿಸಲಿದೆ ಅಂತ ವರದಿಯಾಗಿದೆ. ಈ ತಂಡದಲ್ಲಿ ಅಮೆರಿಕದ ಆರೋಗ್ಯ ತಜ್ಞರು ಇರಲಿದ್ದಾರೆ. ಅವರು ಭಾರತಕ್ಕೆ ಬಂದು ಭಾರತದ ಆರೋಗ್ಯ ತಜ್ಞರ ಜೊತೆ ಸೇರಿಕೊಂಡು ಕೊರೋನಾ ನಿಯಂತ್ರಣಕ್ಕೆ ಪ್ರಯತ್ನ ಪಡಲಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಭಾರತಕ್ಕೆ ಅಮೆರಿಕ ನೀಡ್ತಿರೋ ಸಹಾಯ ಅನ್​ಕಂಡಿಷನಲ್ ಮತ್ತು ಇದಕ್ಕೆ ಪ್ರತಿಯಾಗಿ ಅಮೆರಿಕ ಯಾವುದೇ ರೀತಿಯ ಪೊಲಿಟಿಕಲ್ ಫೇವರ್ ಬಯಸೋದಿಲ್ಲ ಅಂತ ಅಮೆರಿಕದ ಸ್ಟೇಟ್​ ಡಿಪಾರ್ಟ್​​ಮೆಂಟ್​​ನ ವಕ್ತಾರ ನೆಡ್​ ಪ್ರಿನ್ಸ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply