ಇಸ್ರೇಲ್‌ಗೆ ಶಸ್ತ್ರಾಸ್ತ್ರ ನೀಡೋದನ್ನೇ ನಲ್ಲಿಸ್ತೀವಿ! ಬೈಡನ್‌ ಎಚ್ಚರಿಕೆ!

masthmagaa.com:

ಗಾಜಾ ಯುದ್ದಕ್ಕೆ ಸಂಬಂಧಪಟ್ಟಂತೆ ಇಸ್ರೇಲ್‌ ಮೇಲೆ ಭಾರೀ ಒತ್ತಡ ಹೇರಲಾಗ್ತಿದ್ದು ಈಗ ಇಸ್ರೇಲ್‌ ವಿರುದ್ದವೇ ಅಮೆರಿಕ ತಿರುಗಿ ಬಿದ್ದಿದೆ. ಹಮಾಸ್‌ ವಿರುದ್ಧದ ಯುದ್ದದಲ್ಲಿ ಶಸ್ತ್ರಾಸ್ತ್ರಗಳ ಮಳೆಯನ್ನೇ ಸುರಿಸ್ತಿದ್ದ ಅಮೆರಿಕ, ಇಸ್ರೇಲ್‌ಗೆ ಶಸ್ತ್ರಾಸ್ತ್ರ ನೀಡೋದನ್ನೇ ಸ್ಟಾಪ್‌ ಮಾಡಿ ಬಿಡ್ತೀವಿ ಅಂತ ಎಚ್ಚರಿಕೆ ನೀಡಿದೆ. ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಟಿವಿ ಇಂಟರ್‌ವ್ಯೂ ಒಂದ್ರಲ್ಲಿ ಈ ರೀತಿ ಹೇಳಿದ್ದಾರೆ. ʻಗಾಜಾದಲ್ಲಿ ನಡೀತಿರೋ ದಾಳಿಯಿಂದಾಗಿ ನಾಗರಿಕರು ಸಾವನ್ನಪ್ತಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಇಸ್ರೇಲ್‌ ವಾರ್‌ ಕ್ಯಾಬಿನೆಟ್‌ಗೆ ಈ ಬಗ್ಗೆ ಕ್ಲಿಯರ್‌ ಆಗಿ ವಾರ್ನಿಂಗ್‌ ನೀಡಿದ್ದೆ. ನಾಗರಿಕರು ಹೆಚ್ಚಿರೋ ಪ್ರದೇಶಗಳಲ್ಲಿ ದಾಳಿ ನಡೆಸಿದ್ರೆ, ಅಮೆರಿಕದ ಸಪೋರ್ಟ್‌ ಸಿಗಲ್ಲ ಅಂತ ಹೇಳಿದ್ದೆ… ರಫಾ ನಗರದ ಮೇಲೆ ಎಲ್ಲಿಯಾದ್ರು ಆಕ್ರಮಣ ಮಾಡೋಕೆ ಹೋದ್ರೆ… ನಾವು ಇಸ್ರೇಲ್‌ಗೆ ಆಯುಧ ಕೊಡೋದನ್ನ ನಿಲ್ಲಿಸ್ತೀವಿ ಅಂತೇಳಿದ್ದೆ. ಈಗಲೂ ಅದಕ್ಕೆ ಬದ್ದರಾಗಿದ್ದೇವೆʼ ಅಂತ ಜೋ ಬೈಡೆನ್‌ ಹೇಳಿದ್ದಾರೆ. ಆದ್ರೆ ಇದೇ ವೇಳೆ ʻಮಿಡಲ್‌ಈಸ್ಟ್‌ ದಾಳಿಗೆ ಪ್ರತಿಕ್ರಿಯೆ ನೀಡಲು ಇಸ್ರೇಲ್‌ಗೆ ಬೆಂಬಲ ನೀಡೋದನ್ನ ಮಾತ್ರ ಮುಂದುವರೆಸ್ತೀವಿ. ಇಸ್ರೇಲ್‌ಗೆ ರಕ್ಷಣೆ ಕೊಡ್ತೀವಿ. ಬಟ್ ಆಯುಧ ಮಾತ್ರ ಸಪ್ಲೈ ಮಾಡಲ್ಲʼ ಅಂದಿದ್ದಾರೆ. ಇನ್ನು ಅಮೆರಿಕ ಹಾಕಿರೋ ಗೆರೆಯನ್ನ ಇಸ್ರೇಲ್‌ ಈಗ ಕ್ರಾಸ್‌ ಮಾಡಿದ್ಯ ಅಂತ ಪ್ರಶ್ನಿಸಿದಾಗ, ʻʻಇಲ್ಲ ಇನ್ನೂ ಕ್ರಾಸ್‌ ಮಾಡಿಲ್ಲ ಅಂತ ಬೈಡೆನ್‌ ಹೇಳಿದ್ದಾರೆ. ಇನ್ನು ಬೈಡನ್‌ರಿಂದ ಈ ರೀತಿ ಹೇಳಿಕೆ ಬರ್ತಿದ್ದಂತೆ ಅತ್ತ ಇಸ್ರೇಲ್‌ ಕಿಡಿಕಾರಿದೆ. ವಿಶ್ವಸಂಸ್ಥೆಯಲ್ಲಿನ ಇಸ್ರೇಲ್‌ ಖಾಯಂ ಪ್ರತಿನಿಧಿ ಗಿಲಾಡ್‌ ಎರ್ಡಾನ್‌ ʻಈ ವಿಚಾರದಲ್ಲಿ ಬೈಡನ್‌ ಅವ್ರ ಹಸ್ತಕ್ಷೇಪದಿಂದ ಬಹಳ ನಿರಾಶೆಯಾಗಿದೆʼ ಅಂತೇಳಿದ್ದಾರೆ. ಈ ಮೂಲಕ ಗಾಜಾ ಕದನದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಅಂತರ ಮತ್ತೆ ದೂರ ದೂರ ಹೋದಂತಾಗಿದೆ. ಇನ್ನೊಂದು ಕಡೆ ಪ್ಯಾಲೆಸ್ತೀನರಿಗೆ ನೆರವು ಸಾಗಿ ಬರ್ತಿದ್ದ ಗಾಜಾದ ಪ್ರಮುಖ ರಫಾ ಬಾರ್ಡರ್‌ ಕ್ರಾಸಿಂಗ್‌ನ್ನೇ ಇಸ್ರೇಲ್‌ ತನ್ನ ಕಂಟ್ರೋಲ್‌ಗೆ ತಗೊಂಡಿದೆ. ಜೊತೆಗೆ ರಫಾ ಬಾರ್ಡರ್‌ನಲ್ಲಿ ತನ್ನ ದಾಳಿಯನ್ನ ಕಂಟಿನ್ಯೂ ಮಾಡಿದೆ.

ಇನ್ನು ಅಮೆರಿಕದಿಂದ ಇಸ್ರೇಲ್‌ಗೆ ಆ ರೀತಿ ಬೆದರಿಕೆ ಬರ್ತಿದ್ರೆ ಇತ್ತ ಭಾರತ ಕೂಡ ಇಸ್ರೇಲ್‌ಗೆ ಬುದ್ದಿವಾದ ಹೇಳಿದೆ. ʻಪ್ಯಾಲೆಸ್ತೀನರಿಗೆ ಸ್ವತಂತ್ರ ದೇಶ ಸಿಗೋಕೆ ಭಾರತ ಸಪೋರ್ಟ್‌ ಮಾಡುತ್ತೆ. ಹಾಗೂ ಈ ನಿಲುವಿನ ಬಗ್ಗೆ ಭಾರತ ಓಪನ್‌ ಆಗಿದೆʼ ಅಂತ ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ. ಸಭೆಯೊಂದ್ರಲ್ಲಿ ಮಿಡಲ್‌ಈಸ್ಟ್‌ ಉದ್ವಿಗ್ನತೆ ಬಗ್ಗೆ ಮಾತನಾಡಿರೋ ಜೈಶಂಕರ್‌, ʻಅಕ್ಟೋಬರ್‌ 07ರಂದು ಇಸ್ರೇಲ್‌ ಮೇಲೆ ದಾಳಿ ನಡೆದಾಗ… ಅದೊಂದು ಭಯೋತ್ಪಾದಕ ಕೃತ್ಯ ಅಂತ ನಾವು ಹೇಳಿದ್ವಿ. ಅಂದು ನಾವು ನಮ್ಮ ನಿಲುವಿನ ಬಗ್ಗೆ ಬಹಳ ಕ್ಲಿಯರ್‌ ಆಗಿದ್ವಿ. ನಂತ್ರ ಈ ಉಗ್ರ ದಾಳಿಗೆ ಇಸ್ರೇಲ್‌ ಪ್ರತಿದಾಳಿ ನಡೆಸಿದಾಗ, ನಾಗರಿಕರ ಜೀವ ರಕ್ಷಣೆ ಮಾಡೋದು ಕೂಡ ಮುಖ್ಯ ಅಂತೇಳಿ ಸರಿಯಾದ ನಿಲುವು ಹೊಂದಿದ್ವಿ. ಇಸ್ರೇಲ್‌ ಮತ್ತು ಇರಾನ್‌ ಬಡಿದಾಡಿಕೊಂಡಾಗ್ಲೂ ನಮ್ಮ ನಿಲುವನ್ನ ಸ್ಪಷ್ಟ ಪಡಿಸಿದ್ವಿ. ಆ ಎರಡೂ ದೇಶಗಳ ವಿದೇಶಾಂಗ ಸಚಿವರನ್ನ ಕರೆದು ಮಾತುಕತೆ ನಡೆಸಿದ್ವಿ. ಒಟ್ಟಾರೆಯಾಗಿ, ಇಲ್ಲಿ ಏನೇ ಆದ್ರೂ ನಾವು ಪ್ಯಾಲೆಸ್ತೀನ್‌ ಸ್ವತಂತ್ರವಾಗೋಕೆ ಸಪೋರ್ಟ್‌ ಮಾಡ್ತೀವಿ…ಈ ಬಗ್ಗೆ ನಾವು ಸ್ಪಷ್ಟ ಹಾಗೂ ಓಪನ್‌ ಆಗಿದ್ದೇವೆʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply