ಮರುಎಣಿಕೆ ಬಳಿಕವೂ ಜಾರ್ಜಿಯಾ ಬೈಡೆನ್‌ ತೆಕ್ಕೆಗೆ..!

masthmagaa.com:

ವಾಷಿಂಗ್ಟನ್:‌ ಕಳೆದ 28 ವರ್ಷಗಳಿಂದ ರಿಪಬ್ಲಿಕನ್‌ ಪಕ್ಷದ ಭದ್ರಕೋಟೆಯಾಗಿದ್ದ ಜಾರ್ಜಿಯಾ ಕ್ಷೇತ್ರದಲ್ಲಿ ನಿಯೋಜಿತ ಅಮೆರಿಕ ಅಧ್ಯಕ್ಷ  ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ಅವರು ಗೆಲುವು ಸಾಧಿಸಿದ್ದಾರೆ.

ನ.3ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕೆಲ ಕಾರಣಗಳಿಂದಾಗಿ ಕೆಲವು ಕ್ಷೇತ್ರಗಳಲ್ಲಿ ಮತಗಳ ಮರುಎಣಿಕೆ ಕಾರ್ಯ ನಡೆಯುತ್ತಿದೆ. ಇದ್ರಂತೆ ಜಾರ್ಜಿಯಾ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳು ಮತಗಳನ್ನು ಮರುಎಣಿಕೆ ಮಾಡಿದ್ದು. ಇದರಲ್ಲಿ ಜೋ ಬೈಡನ್ ಅವರು ವಿಜೇತರಾಗಿದ್ದಾರೆಂದು ಘೋಷಣೆ ಮಾಡಿದ್ದಾರೆ.

ಸುಮಾರು 50 ಲಕ್ಷ ಮತಗಳನ್ನ ಮರುಎಣಿಕೆ ಮಾಡಿದ ಬಳಿಕ ಬೈಡೆನ್‌ ಅವರು ಟ್ರಂಪ್‌ ವಿರುದ್ಧ 12,284 ಮತಗಳ ಅಂತರದಿಂದ ವಿಜೇತರಾಗಿದ್ದಾರೆ. ಈ ಹಿಂದೆ ಬೈಡೆನ್‌ 14000 ಮತಗಳ ಅಂತರದಿಂದ ಜಯಗಳಿಸಿದ್ದರು. ಮತಗಳ ಮರುಎಣಿಕೆಯ ಬಳಿಕವೂ ಬೈಡೆನ್‌ ಅವರೇ ಜಯಶಾಲಿ ಅಗಿದ್ದಾರೆ ಅಂತ ಅಧಿಕಾರಿಗಳು ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply