ಭಾರತಕ್ಕೆ ಅಮೆರಿಕ ಮಿತ್ರದ್ರೋಹ!

masthmagaa.com:

ಭಾರತದಲ್ಲಿ ಕೊರೋನಾ ಸಂಖ್ಯೆ ಮಿಂಚಿನ ವೇಗದಲ್ಲಿ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಆಕ್ಸಿಜನ್ ಸಿಗದೇ ಜನ ಪರದಾಡ್ತಿದ್ದಾರೆ. ಮತ್ತೊಂದ್ಕಡೆ ಲಸಿಕೆ ಉತ್ಪಾದಿಸಲು ಬೇಕಾದ ಕಚ್ಚಾ ವಸ್ತುಗಳ ಕೊರತೆ ಎದುರಾಗಿದೆ. ಇಂಥಾ ಹೊತ್ತಲ್ಲಿ ಭಾರತ ಅಮೆರಿಕದ ಬಳಿ ಸಹಾಯ ಯಾಚಿಸಿದ್ದು, ಅಮೆರಿಕ ಉಲ್ಟಾ ಹೊಡೆದಿದೆ. ಅಮೆರಿಕ ಲಸಿಕೆಯಲ್ಲಿ ಬಳಸಲಾಗುವ ಕಚ್ಚಾ ವಸ್ತುಗಳ ರಫ್ತಿನ ಮೇಲೆ ನಿರ್ಬಂಧ ವಿಧಿಸಿದೆ. ಹೀಗಾಗಿ ಈ ನಿರ್ಬಂಧವನ್ನು ಸಡಿಲಗೊಳಿಸಿ ಭಾರತಕ್ಕೆ ಲಸಿಕೆಗೆ ಬೇಕಾಗುವ ಕಚ್ಚಾವಸ್ತುಗಳನ್ನು ರಫ್ತು ಮಾಡಲು ಅವಕಾಶ ನೀಡಬೇಕು ಅಂತ ಭಾರತ ಮನವಿ ಮಾಡಿತ್ತು. ಆದ್ರೆ ಭಾರತದ ಮನವಿಯನ್ನು ಅಮೆರಿಕ ತಿರಸ್ಕರಿಸಿದೆ. ಬೈಡೆನ್ ಆಡಳಿತದಲ್ಲಿ ಅಮೆರಿಕನ್ನರಿಗೆ ಮೊದಲು ಆದ್ಯತೆ.. ಅವರ ಅವಶ್ಯಕತೆಗಳನ್ನು ಪೂರೈಸೋದೇ ನಮ್ಮ ಗುರಿ ಅಂತ ಹೇಳಿದೆ. ಅದೇ ಹೋದ ವರ್ಷ ಅಮೆರಿಕದಲ್ಲಿ ಕೊರೋನಾ ಮಿತಿ ಮೀರಿ, ಚಿಕಿತ್ಸೆಗೆ ಬಳಸೋ ಹೈಡ್ರಾಕ್ಸಿಕ್ಲೋರೋಕ್ವಿನ್ ಸ್ಟಾಕೇ ಇರಲಿಲ್ಲ.. ಆಗ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿನ ಮೇಲೆ ಭಾರತ ನಿರ್ಬಂಧ ವಿಧಿಸಿತ್ತು. ಅಮೆರಿಕ ಮನವಿ ಮೇರೆಗೆ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತ್ತು. ಮನವಿ ಅನ್ನೋಕ್ಕಿಂತ ಆಗ ಅಧ್ಯಕ್ಷರಾಗಿದ್ದ ಟ್ರಂಪ್, ಬೆದರಿಸಿದ್ರು ಅಂತಲೇ ಹೇಳಬೋದು.. ಬೆದರಿಕೆಗೋ, ಮಾನವೀಯತೆಗೋ ಒಟ್ನಲ್ಲಿ ನಿರ್ಬಂಧವನ್ನು ತೆರವುಗೊಳಿಸಿತ್ತು ಭಾರತ. ಆದ್ರೆ ಭಾರತ ಸಹಾಯ ಕೇಳಿದಾಗ, ಅಮೆರಿಕ ಕೈ ಎತ್ತಿದೆ. ಅದೇ ಭಾರತ ಲಸಿಕೆ ಅಭಿಯಾನ ನಡೆಸುತ್ತಿದ್ದರೂ ಆರಂಭದಲ್ಲಿ ಭಾರಿ ಪ್ರಮಾಣದಲ್ಲಿ ಲಸಿಕೆಗಳನ್ನು ರಫ್ತು ಮಾಡ್ತು.. ಕೆಲ ದೇಶಗಳಿಗಂತೂ ಪುಗಸಟ್ಟೆಯಾಗಿ ಲಕ್ಷಗಟ್ಟಲೆ ಡೋಸ್​​ಗಳನ್ನು ಕೊಡ್ತು.. ಈವರೆಗೆ ಭಾರತ 6 ಕೋಟಿ ಡೋಸ್ ಲಸಿಕೆಗಳನ್ನು ರಫ್ತು ಮಾಡಿದೆ. ಆದ್ರೀಗ ಭಾರತದಲ್ಲೇ ಕೊರೋನಾ ಲಸಿಕೆಗೆ ಕೊರತೆ ಉಂಟಾಗಿದೆ. ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಒಂದು ರೀತಿಯಲ್ಲಿ ವೈರಿಯಾಗಿದ್ದರೂ ಪಕ್ಕದ ಚೀನಾ ಕೂಡ ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡಲು ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಅಂತ ಹೇಳಿದೆ. ಅದ್ರ ಹಿಂದೆ ಸ್ವಾರ್ಥದ ಉದ್ದೇಶ ಇದ್ಯೋ ಇಲ್ವೋ ಗೊತ್ತಿಲ್ಲ. ಆದ್ರೂ ಸಹಾಯಕ್ಕೆ ಮುಂದಾಗಿದೆ. ಆದ್ರೆ ಅಮೆರಿಕ ಸ್ವಾರ್ಥ ಮೆರೆದಿದೆ.

ಈ ನಡುವೆ ಭಾರತಕ್ಕೆ ಅಸ್ಟ್ರಾಜೆನೆಕಾ ಲಸಿಕೆ ಮತ್ತು ಇತರೆ ವೈದ್ಯಕೀಯ ಉಪಕರಣಗಳನ್ನು ಪೂರೈಸಬೇಕು ಅನ್ನೋ ಒತ್ತಡ ಅಮೆರಿಕದಲ್ಲೂ ಜೋರಾಗಿದೆ. ಬೈಡೆನ್ ಸರ್ಕಾರದ ಮೇಲೆ ಯುಎಸ್ ಚೇಂಬರ್ಸ್​ ಆಫ್ ಕಾಮರ್ಸ್​​, ಸಂಸದರು, ಭಾರತೀಯ ಮೂಲದ ಅಮೆರಿಕನ್ನರು ಒತ್ತಡ ಹೇರುತ್ತಿದ್ದಾರೆ. ಆದ್ರೆ ಅಮೆರಿಕ ಮಾತ್ರ ಭಾರತಕ್ಕೆ ಲಸಿಕೆ ಬಿಡಿ.. ಲಸಿಕೆ ಉತ್ಪಾದನೆಗೆ ಬೇಕಾಗೋ ಕಚ್ಚಾವಸ್ತುಗಳನ್ನು ಪೂರೈಸಲು ಮುಂದಾಗ್ತಿಲ್ಲ. ಈ ವಸ್ತುಗಳನ್ನು ರಫ್ತಿನ ಮೇಲೆ ಹೇರಿರೋ ನಿರ್ಬಂಧವನ್ನು ತೆಗೆಯುವಂತೆ ಭಾರತ ಮನವಿ ಮಾಡಿದ್ರೂ ಕೂಡ, ಅಮೆರಿಕನ್ನರೇ ಮೊದಲು ಅಂತ ಹೇಳಿ ನಿರಾಕರಿಸಿದೆ. ಅಂದ್ರೆ ಮೊದಲು ಅಮೆರಿಕನ್ನರಿಗೆ ಲಸಿಕೆ ಹಾಕ್ತೀವಿ, ಆಮೇಲೆ ಉಳಿದಿದ್ದು ಅಂತ.. ಅದೇ ಭಾರತ ಲಸಿಕೆ ಅಭಿಯಾನ ಶುರುವಾಗ್ತಿದ್ದಂತೆ ಹಲವು ದೇಶಗಳಿಗೆ ಪುಗಸಟ್ಟೆಯಾಗಿ ಲಸಿಕೆ ದಾನ ಮಾಡಿತ್ತು. ಆದ್ರೀಗ ಭಾರತದ ಕಷ್ಟಕ್ಕೆ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡಿರೋ ಅಮೆರಿಕ ಆಗ್ತಿಲ್ಲ.. ಇತ್ತ ಬ್ರಿಟನ್ ಕೂಡ ಕೊರೋನಾ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಅಗತ್ಯ ನೆರವು ನೀಡೋದಾಗಿ ಘೋಷಿಸಿದೆ.

-masthmagaa.com

Contact Us for Advertisement

Leave a Reply