ರೇಟಿಂಗ್‌ ನೀಡಿ ಭಾರತವನ್ನ ನ್ಯೂಟ್ರಲ್‌ನಿಂದ ʻಓವರ್‌ವೇಟ್‌ʼಗೆ ಅಪ್‌ಗ್ರೇಡ್‌ ಮಾಡಿದ ಜೆಪಿ ಮಾರ್ಗನ್‌!

masthmagaa.com:

ಭಾರತ ತನ್ನ ಆರ್ಥಿಕ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳೋದ್ರಲ್ಲಿ ಬೆಳವಣಿಗೆಯನ್ನ ತೋರಿಸ್ತಾ ಇದ್ದು, ಕೆಲ ಪ್ರಮುಖ ಬ್ರೋಕರೇಜ್‌ ಕಂಪನಿಗಳು ಭಾರತಕ್ಕೆ ಉತ್ತಮ ರೇಟಿಂಗ್‌ ನೀಡಿವೆ. ಇದೀಗ ಜೆಪಿ ಮಾರ್ಗನ್‌ ಈ ಕಂಪನಿಗಳ ಲಿಸ್ಟ್‌ಗೆ ಸೇರಿಕೊಂಡು ಭಾರತಕ್ಕೆ ಹೆಚ್ಚುವರಿ ರೇಟಿಂಗ್‌ನ್ನ ನೀಡಿ ಭಾರತವನ್ನ ನ್ಯೂಟ್ರಲ್‌ನಿಂದ ʻಓವರ್‌ವೇಟ್‌ʼಗೆ ಅಪ್‌ಗ್ರೇಡ್‌ ಮಾಡಿದೆ. ದೇಶದ GDPಯಲ್ಲಿ ದೃಢವಾದ ಬೆಳವಣಿಗೆ, ದೇಶೀಯ ಬಾಂಡ್‌ ಮಾರ್ಕೆಟ್‌ನ ವಿಸ್ತರಣೆ ಸೇರಿದಂತೆ ಹಲವಾರು ಅಂಶಗಳು ಈ ರೇಟಿಂಗ್‌ ಅಪ್‌ಗ್ರೇಡ್‌ಗೆ ಕಾರಣವಾಗಿದೆ. ಜೆಪಿ ಮಾರ್ಗನ್ ಜೊತೆ ಮಾರ್ಗನ್‌ ಸ್ಟ್ಯಾನ್ಲೀ, ನೊಮುರಾ, ಸಿಎಲ್‌ಎಸ್‌ಎ ಮೊದಲಾದ ಜಾಗತಿಕ ಬ್ರೋಕರೇಜ್‌ ಕಂಪನಿಗಳು ಭಾರತಕ್ಕೆ ಓವರ್‌ವೇಟ್‌ ರೇಟಿಂಗ್‌ನ್ನ ನೀಡಿವೆ.

-masthmagaa.com

Contact Us for Advertisement

Leave a Reply