ಹಿಂದೆಂದೂ ಕಂಡಿರದ ಗರಿಷ್ಠ ಜಾಗತಿಕ ತಾಪಮಾನ ದಾಖಲೆ!

masthmagaa.com:

ಜಾಗತಿಕವಾಗಿ ಗರಿಷ್ಠ ತಾಪಮಾನ ನಿನ್ನೆ ಅಂದ್ರೆ ಜುಲೈ 3ರಂದು ದಾಖಲಾಗಿದೆ. ಈ ಮಾಹಿತಿ ಅಮೆರಿಕದ ನ್ಯಾಷನಲ್‌ ಸೆಂಟರ್ಸ್‌ ಫಾರ್‌ ಎನ್ವಿರಾನ್‌ಮೆಂಟಲ್‌ ಪ್ರೆಡಿಕ್ಶನ್‌ನಿಂದ ತಿಳಿದು ಬಂದಿದೆ. ಜುಲೈ 3 ರಂದು ಜಾಗತಿಕ ಸರಾಸರಿ ತಾಪಮಾನ 17.01 ಡಿಗ್ರಿ ಸೆಲ್ಸಿಯಸ್‌ನಷ್ಟು ರೆಕಾರ್ಡ್‌ ಆಗಿದೆ. ಇದು 2016ರಲ್ಲಿ ದಾಖಲೆ ಬರೆದಿದ್ದ ಜಾಗತಿಕ ಸರಾಸರಿ ತಾಪಮಾನ 16.92 ಡಿಗ್ರಿ ಸೆಲ್ಸಿಯಸ್‌ನ್ನ ಹಿಂದಿಕ್ಕಿದೆ. ಈ ಮೂಲಕ ಹಿಂದೆಂದೂ ಕಂಡಿರದ ಗರಿಷ್ಠ ತಾಪಮಾನ ದಾಖಲಾಗಿದೆ. ಆದ್ರೆ ಇದು ನಾವು ಸೆಲೆಬ್ರೇಟ್‌ ಮಾಡುವಂಥ ದಾಖಲೆಯಲ್ಲ. ಇದು ಜನರ ಹಾಗೂ ಎಕೋಸಿಸ್ಟಮ್‌ಗೆ ಸಾವಿನ ಶಿಕ್ಷೆ ಅಂತ ಕ್ಲೈಮೇಟ್‌ ಸೈಟಿಂಸ್ಟ್‌ ಫ್ರೆಡ್‌ರಿಕ್‌ ಒಟೊ ಹೇಳಿದ್ದಾರೆ. ಭಾರತದಲ್ಲಿ ಮಳೆಗಾಲ ಆರಂಭವಾಗಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕರ್ನಾಟಕದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಮ್ಮಲ್ಲಿ ತಂಪು ವಾತಾವರಣ ಇರುವ ಈ ಸಂದರ್ಭದಲ್ಲಿ ಜುಲೈ​ 3 ರಂದು ವಿಶ್ವದಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಅಂದ್ಹಾಗೆ ದಕ್ಷಿಣ ಅಮೆರಿಕ ಇತ್ತೀಚಿನ ವಾರಗಳಲ್ಲಿ ತೀವ್ರವಾದ ತಾಪಮಾನ ಏರಿಕೆಯಿಂದ ಬಳಲುತ್ತಿದೆ. ಚೀನಾದಲ್ಲಿ ಕೂಡ ಹಲವು ದಿನಗಳಿಂದ 35 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಉತ್ತರ ಆಫ್ರಿಕಾ ಸುಮಾರು 50 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಎದುರಿಸಿದೆ.

 

-masthmagaa.com

Contact Us for Advertisement

Leave a Reply