ಕುಸ್ತಿ ಪಟುಗಳ ವಿರುದ್ಧ ಹೋರಾಟಕ್ಕಿಳಿದ ಜೂನಿಯರ್‌ಗಳು!

masthmagaa.com

ಕುಸ್ತಿ ಪಟುಗಳು ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ನಡುವಿನ ಸಂಘರ್ಷ ಒಂದು ಹಂತಕ್ಕೆ ಬಂದು ನಿಂತಿದೆ. ಆದ್ರೆ ಇದೀಗ ಬ್ರಿಜ್‌ ಭೂಷಣ್‌ ವಿರುದ್ಧ ಪ್ರತಿಭಟನೆ ನಡೆಸಿದ ಚಾಂಪಿಯನ್‌ ವ್ರೆಸ್ಟ್ಲರ್‌ಗಳ ವಿರುದ್ಧ ಜೂನಿಯರ್‌ ಕುಸ್ತಿ ಪಟುಗಳು ಪ್ರತಿಭಟನೆ ಶುರು ಮಾಡ್ಕೊಂಡಿದ್ದಾರೆ. ಭಜರಂಗ್‌ ಪೂನಿಯ, ಸಾಕ್ಷಿ ಮಲಿಕ್‌ ಹಾಗೂ ವಿನೇಶ್‌ ಪೋಗಟ್‌ ಅವ್ರಿಂದ ನಮ್ಮ ಕುಸ್ತಿ ಕೆರಿಯರ್‌ ಹಾಳಾಗಿದೆ. ಕುಸ್ತಿ ಫೆಡರೇಷನ್‌ ಸಮಿತಿ ಸಸ್ಪೆಂಡ್‌ ಆಗಿದ್ರಿಂದ ನಮ್ಮ ಟೈಮ್‌ ವೇಸ್ಟ್‌ ಆಗಿದೆ. ನಮ್ಮ ಟ್ರೈನಿಂಗ್‌ ಹಾಗೂ ಕಾಂಪಿಟೇಶನ್‌ಗಳಿಗೆ ತೊಂದರೆ ಆಗಿದೆ ಅಂತ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಜಮಾಯಿಸಿ ಚಾಂಪಿಯನ್‌ ಕುಸ್ತಿಪಟುಗಳ ವಿರುದ್ಧ ಬ್ಯಾನರ್‌ ಹಿಡಿದು ಘೋಷಣೆ ಕೂಗಿದ್ದಾರೆ. ಅಲ್ಲದೆ ಯುನೈಟೆಡ್‌ ವರ್ಲ್ಡ್‌ ವ್ರೆಸ್ಟ್ಲಿಂಗ್‌ ಅಥ್ವಾ UWW ಗೆ ʻಈ ಮೂವರು ವ್ರೆಸ್ಟ್ಲರ್‌ಗಳಿಂದ ನಮ್ಮನ್ನ ರಕ್ಷಿಸಿʼ ಅಂತ ಮನವಿ ಮಾಡಿದ್ದಾರೆ. ಇನ್ನೊಂದ್ಕಡೆ ಕುಸ್ತಿ ಪಟು ಸಾಕ್ಷಿ ಮಲಿಕ್‌, ಸಂಜಯ್‌ ಸಿಂಗ್‌ ಇಲ್ಲದ WFI ವಾಪಸ್‌ ಬಂದ್ರೆ, ನಮಗೆ ಯಾವುದೆ ಅಭ್ಯಂತರ ಇಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply