ಗುರುಗ್ರಹದ ಚಂದ್ರ ಯುರೋಪಾ! ಅಲ್ಲೇನಿದೆ ಗೊತ್ತಾ?

masthmagaa.com:

ಗುರುಗ್ರಹದ ಚಂದ್ರ ಯೂರೋಪಾದಲ್ಲಿ ಜೀವದ ಸೆಲೆಯಿದೆ ಅನ್ನೋದಕ್ಕೆ ಒಂದೊಂದೇ ಸಾಕ್ಷ್ಯಗಳು ಲಭ್ಯವಾಗ್ತಿವೆ.. ಇದೀಗ ನಡೆದ ಅಧ್ಯಯನವೊಂದ್ರಲ್ಲಿ ಯೂರೋಪಾದ ಒಳಭಾಗದಲ್ಲಿ ಜ್ವಾಲಾಮುಖಿ ಇದೆ ಅಂತ ಗೊತ್ತಾಗಿದೆ. ಯೂರೋಪಾ ಕಂಪ್ಲೀಟಾಗಿ ಮಂಜುಗಡ್ಡೆಯಿಂದ ಕೂಡಿದ್ದ ಅದರಾಳದಲ್ಲಿ ವಿಶಾಲವಾದ ಸಮುದ್ರ ಇದೆ ಅಂತ ಈಗಾಗಲೇ ವಿಜ್ಞಾನಿಗಳು ಅಂದಾಜಿಸಿದ್ಧಾರೆ. ಇದೀಗ ಜ್ವಾಲಾಮುಖಿ ಕೂಡ ಇದೆ ಅಂತ ಅಧ್ಯಯನವೊಂದು ಹೇಳಿದೆ. ಒಂದ್ವೇಳೆ ಜ್ವಾಲಾ ಮುಖಿ ಇದ್ರೆ ಜೀವಿಗಳಿರಬಹುದು ಅನ್ನೋ ವಾದಕ್ಕೆ ಮತ್ತಷ್ಟು ಬಲ ಸಿಗುತ್ತೆ. ಯಾಕಂದ್ರೆ ಸಮುದ್ರದಾಳದ ಈ ಜ್ವಾಲಾಮುಖಿಗಳು ಜೀವಿಗಳಿಗೆ ಬೇಕಾದ ತಾಪಮಾನ ಕಾಪಾಡೋ ಕೆಲಸ ಮಾಡುತ್ತವೆ. ಅಂದಹಾಗೆ ಜೆಕ್​​ನ ಚಾರ್ಲ್ಸ್​ ಯೂನಿವರ್ಸಿಟಿಯ ತಜ್ಞರು ಈ ಅಧ್ಯಯನ ನಡೆಸಿದ್ದಾರೆ. ಇದಕ್ಕೂ ಮುನ್ನ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಯೂರೋಪಾದ ಸಮುದ್ರ ತಳದಲ್ಲಿ ಜ್ವಾಲಾಮುಖಿ ಚಟುವಟಿಕೆಗಳು ಈ ಹಿಂದೆ ನಡೆದಿರಬಹುದು. ಈಗಲೂ ನಡೆಯುತ್ತಿರಬಹುದು ಅಂತ ಹೇಳಿತ್ತು.

-masthmagaa.com

Contact Us for Advertisement

Leave a Reply