ಶರಣ್ ಕಂಠಸಿರಿಯಲ್ಲಿ “ಜಸ್ಟ್ ಪಾಸ್” ಚಿತ್ರದ ಹಾಡು .

masthmagaa.com:

ನಾಯಕರಾಗಿ ಪ್ರಸಿದ್ಧರಾಗಿರುವ ಶರಣ್ , ಗಾಯಕರಾಗೂ ಅಷ್ಟೇ ಪ್ರಸಿದ್ದಿ. ಸದ್ಯ ಕೆ.ಎಂ.ರಘು ನಿರ್ದೇಶನದ “ಜಸ್ಟ್ ಪಾಸ್” ಚಿತ್ರಕ್ಕಾಗಿ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ “ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು” ಎಂಬ ಹಾಡನ್ನು ನಟ-ಗಾಯಕ ಶರಣ್ ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಸಾಧುಕೋಕಿಲ ಅಭಿನಯಿಸಿದ್ದಾರೆ.

ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಎಂ.ರಘು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಶ್ರೀ “ಜಸ್ಟ್ ಪಾಸ್” ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ.

ನಾಯಕಿ ಪ್ರಣತಿ ಈ ಚಿತ್ರದ ನಾಯಕಿ. ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಮಿನಾಡು, ಗೋವಿಂದೇಗೌಡ ಮುಂತಾದವರುವ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸುಜಯ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.

-masthmagaa.com

Contact Us for Advertisement

Leave a Reply