48ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ರಮಣ ಅಧಿಕಾರ ಸ್ವೀಕಾರ!

masthmagaa.com:

ಇವತ್ತು ಜಸ್ಟೀಸ್ ನೂತಲಪಟಿ ವೆಂಕಟ ರಮಣ ಅಂದ್ರೆ ಎನ್​​​ವಿ ರಮಣ ದೇಶದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಿದ್ರು. ನಿನ್ನೆಯಷ್ಟೇ ನ್ಯಾಯಮೂರ್ತಿ ಎಸ್​​.ಎ ಬೋಬ್ಡೆ ನಿವೃತ್ತಿಯಾಗಿದ್ರು. ಅವರು ತಮ್ಮ ಉತ್ತರಾಧಿಕಾರಿಯಾಗಿ ಎನ್​​.ವಿ ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಅಂದಹಾಗೆ ಎನ್​ವಿ ರಮಣ, ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನವರಂ ಗ್ರಾಮದವರಾಗಿದ್ದಾರೆ. ಈಗಾಗಲೇ ಆಂಧ್ರ ಪ್ರದೇಶ, ದೆಹಲಿ ಹೈಕೋರ್ಟ್​​​ನಲ್ಲಿ ಜಡ್ಜ್​​, ಚೀಫ್ ಜಸ್ಟೀಸ್​ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರನ್ನು 2014ರ ಫೆಬ್ರವರಿ 17ರಂದು ಸುಪ್ರೀಂಕೋರ್ಟ್​​ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply