ಟ್ರುಡು ಸರ್ಕಾರದ ಮೇಲೆ ಚೀನಾಗೆ ಗೌಪ್ಯ ಮಾಹಿತಿ ಲೀಕ್‌ ಮಾಡಿದ ಆರೋಪ!

masthmagaa.com:

ನಿನ್ನೆಯಷ್ಟೇ ಕೆನಡಾ ಇಂಟಲಿಜೆನ್ಸ್‌ ಅಧಿಕಾರಿಗಳು ಪ್ರಧಾನಿ ಜಸ್ಟಿನ್‌ ಟ್ರುಡುಗೆ ಮಹಾಮಂಗಳಾರತಿ ಮಾಡಿದ್ರು. ಇದೀಗ ಅಲ್ಲಿನ ವಿರೋಧ ಪಕ್ಷಗಳು ಟ್ರುಡು ಮೇಲೆ ಇನ್ನೂ ದೊಡ್ಡ ಆರೋಪ ಹೊರಿಸಿವೆ. ಕೆನಡಾದ ವಿನ್ನಿಪೆಗ್‌ನಲ್ಲಿರೋ ಹೈ ಸೆಕ್ಯೂರಿಟಿ ಲ್ಯಾಬ್‌ನಲ್ಲಿ ಭದ್ರತಾ ದೋಷ ಆಗಿದೆ. ಚೀನಾಗೆ ಈ ಲ್ಯಾಬ್‌ಗೆ ಒಳನುಸುಳೋಕೆ ಟ್ರುಡು ಹೆಲ್ಪ್‌ ಮಾಡಿದ್ದಾರೆ ಅಂತ ವಿಪಕ್ಷಗಳು ಆರೋಪಿಸಿವೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನ ಕೆನಡಾ ವಿಪಕ್ಷಗಳು ಅಲ್ಲಿನ ಮಾಧ್ಯಮಗಳ ಮುಂದಿಟ್ಟಿವೆ. ಟ್ರುಡು ಸರ್ಕಾರದ ಪ್ಯಾತೋಜನ್ಸ್‌ ಅಥವಾ ರೋಗಕಾರಕಗಳ ಇಲಾಖೆಯ ಹೆಡ್‌, ಚೀನಾದ ಪೀಪಲ್ಸ್‌ ಲಿಬರೇಟಿಂಗ್‌ ಆರ್ಮಿ ಜೊತೆ ಕೈಜೋಡಿಸಿದ್ದಾರೆ. ಚೀನಾ ಅಧಿಕಾರಿಗಳು ವಿನ್ನಿಪೆಗ್‌ನ ಲ್ಯಾಬ್‌ಗೆ ಬಂದು ಮಹತ್ವ ಹಾಗೂ ಸೂಕ್ಷ್ಮವಾದ ದಾಖಲೆಗಳನ್ನ ಪಡೆದಿದ್ದಾರೆ. ಆ ಮೂಲಕ ಕೊರೋನದಂತ ಜೈವಿಕ ಆಯುಧಗಳ ತಯಾರಿಸೋ, ಜೈವಿಕ ಭಯೋತ್ಪಾದನೆಗೆ ಕುಮ್ಮಕ್ಕು ಕೊಡೋ ಚೀನಾಗೆ ಕೆನಡಾದಲ್ಲಿ ರಿಸರ್ಚ್‌ ನಡೆಸೋಕೆ, ಟ್ರುಡು ಸರ್ಕಾರ ಸಹಾಯ ಮಾಡಿದೆ. ಕೆನಡಾದ ಭದ್ರತೆಗೆ ಧಕ್ಕೆ ತಂದಿದೆ ಅಂತ ಕೆನಡಾ ಆಪೊಸಿಶನ್‌ ಲೀಡರ್‌, ಪಿಯ ಪಾಲಿಯವ್ರ (Pierre Poilievre) ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಟ್ರುಡು ಸರ್ಕಾರ ಈ ಬಗ್ಗೆ ಸದ್ಯ ಯಾವುದೇ ರಿಪ್ಲೈ ನೀಡಿಲ್ಲ.

-masthmagaa.com

Contact Us for Advertisement

Leave a Reply