ಪ್ರಧಾನಿ ಕೆಲಸ ಬೋರಿಂಗ್‌ ಎಂದ ಕೆನಡಾ PM ಜಸ್ಟಿನ್‌ ಟ್ರುಡು!

masthmagaa.com:

ದಿನಾ ಬೆಳಿಗ್ಗೆ ಎದ್ದು ನಾನು ಈ ಕ್ರೇಜಿ ಜಾಬ್‌ನ್ನ.. ಅಂದರೆ ಪ್ರಧಾನಿ ಕೆಲಸವನ್ನ ಬಿಡೋ ಬಗ್ಗೆ ಯೋಚ್ನೆ ಮಾಡ್ತಿದ್ದೆ ಕೆನಡ ಪ್ರಧಾನಿ ಜಸ್ಟೀನ್‌ ಟ್ರುಡು ಹೇಳಿದ್ದಾರೆ. ಆದ್ರೆ ಈಗ ಆ ರೀತಿಯ ಯೋಚನೆ ಬಿಟ್ಟು ಇರುವಷ್ಟು ಅವಧಿಯಲ್ಲಿ ಕೆಲಸ ಮಾಡೋಕೆ ಡಿಸೈಡ್‌ ಮಾಡಿದ್ದೇನೆ ಅಂದಿದ್ದಾರೆ. ಅಂದ್ಹಾಗೆ ಟ್ರುಡು ಈ ಮಾತು ಹೇಳೋಕು ಕಾರಣ ಇದೆ. ಹಲವು ತಿಂಗಳುಗಳಿಂದ ಅಲ್ಲಿನ ಚುನಾವಣಾ ಸಮೀಕ್ಷೆಗಳಲ್ಲಿ ಟ್ರುಡುಗೆ ಹಿನ್ನಡೆ ಆಗ್ತಾ ಇದೆ. ಅಲ್ಲಿನ ಆಪೋಸಿಶನ್‌, ಕನ್ಸರ್ವೇಟಿವ್‌ ಪಾರ್ಟಿಯ ಪಿರ್ರೀ ಪಾಲಿವ್ರೆ… ಲೀಡ್‌ನಲ್ಲಿದ್ದಾರೆ. ಇದ್ರಿಂದ ಕಂಗೆಟ್ಟಿರೋ ಟ್ರುಡು, ಪ್ರಧಾನಿ ಹುದ್ದೆಯನ್ನ.. ಕ್ರೇಜಿ ಜಾಬ್‌ ಅಂದಿದ್ದಾರೆ. ಅಲ್ಲದೆ ಈ ಹುದ್ದೆಯಲ್ಲಿದ್ರೆ ಬಹಳಷ್ಟು ವೈಯಕ್ತಿಕ ತ್ಯಾಗಗಳನ್ನ ಮಾಡ್ಬೇಕಾಗುತ್ತೆ. ಇದು ಬಹಳ ಕಷ್ಟ. ಬೋರಿಂಗ್‌ ಕೂಡ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply