ಕಬ್ಜ ಪ್ರೀ-ರಿಲೀಸ್‌ ಇವೆಂಟ್‌..ಶಿವರಾಜ್‌ಕುಮಾರ್‌ ಗೈರು..!

masthmagaa.com:

ಖ್ಯಾತ ನಿರ್ದೇಶಕ ಆರ್‌. ಚಂದ್ರು ನಿರ್ದೇಶನದ ಕಬ್ಜ ಚಿತ್ರ ರಿಲೀಸ್‌ಗೆ ಇನ್ನೇನು ದಿನಗಳು ಮಾತ್ರ ಬಾಕಿ ಉಳಿದಿವೆ. ವಿಶ್ವದಾದ್ಯಂತ ಅದ್ದೂರಿಯಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ, ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ತುಂಬಾ ಜೋರಾಗಿ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಮಾಡಲಾಯಿತು. ಇನ್ನೂ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ ಅವರು ʼಕಬ್ಜ-2ʼ ಸಿನಿಮಾದಲ್ಲಿ ನನಗೆ ಅತಿಥಿ ಪಾತ್ರ ಕೊಡಿ, ಸುದೀಪ್‌ ಅವರನ್ನ ಹೀರೋ ಆಗಿ ಮಾಡಿ ಎಂದು ನಿರ್ದೇಶಕ ಆರ್‌. ಚಂದ್ರು ಅವರಲ್ಲಿ ಕೇಳಿದರು. ಈ ರೀತಿ ಉಪೇಂದ್ರ ಅವರು ಕಬ್ಜ 2 ಸಿನಿಮಾದ ಸುಳಿವು ನೀಡಿದರು.
ಸಿನಿಮಾದ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್‌ ಅವರು ಗೈರಾಗಿದ್ದರು. ಇದರ ಬಗ್ಗೆ ಮಾತಾನಾಡಿದ ಅರ್.‌ ಚಂದ್ರು ಅವರು ʼಕಬ್ಜ ಸಿನಿಮಾ ಆಗೋಕೆ ಈ ಮೂವರು (ಉಪೇಂದ್ರ, ಸುದೀಪ್, ಶಿವರಾಜ್‌ಕುಮಾರ್‌) ಕಾರಣ. ಇಬ್ಬರು ಲೆಜೆಂಡ್‌ಗಳು ಇಲ್ಲಿದ್ದಾರೆ. ಮತ್ತೋರ್ವ ಲೆಜೆಂಡ್‌ ಶಿವಣ್ಣ ಬಂದಿಲ್ಲ. ಅವರು ನನಗೆ, ಮತ್ತು ಕರ್ನಾಟಕಕ್ಕೆ ಅಣ್ಣ. ಅವರು ಇಂದು ಬರಬೇಕಿತ್ತು. ಆದರೆ, ಕೇರಳದಲ್ಲಿ ಶೂಟಿಂಗ್‌ ಇರೋದ್ರಿಂದ ಅವರು ಬರೋಕೆ ಆಗುತ್ತಿಲ್ಲʼ ಎಂದು ಅವರು ಬರದೆ ಇರುವುದರ ಬಗ್ಗೆ ಸ್ಪಷ್ಟನೆ ನೀಡಿದರು.

ನಿರ್ದೇಶಕ ಆರ್‌ ಚಂದ್ರು ಅವರನ್ನು ಅಭಿನಂದಿಸಿದ ಸುದೀಪ್‌, ʼಇಂಥದ್ದೊಂದು ಚಿತ್ರದಲ್ಲಿ ಭಾಗಿಯಾಗಿದ್ದೇನೆ ಎನ್ನುವುದು ಖುಷಿ ನೀಡಿದೆ. ನಿರ್ದೇಶಕರು ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಈ ಸಿನಿಮಾವನ್ನ ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ಹೃದಯಕ್ಕೆ ಹತ್ತಿರ ಇದ್ದವರು ಸಿನಿಮಾ ಮಾಡಿದಾಗ, ಅವರಿಗೆ ಸಪೋರ್ಟ ಮಾಡುವುದು ನನ್ನ ಕರ್ತವ್ಯ. ನಾನು ಮಾಡಿದ್ದೇನೆʼ ಎಂದು ಹೇಳಿದರು.
ʼಕಬ್ಜʼ ಚಿತ್ರ ಮಾರ್ಚ್‌ 17ರಂದು ಬಿಡುಗಡೆ ಆಗುತ್ತಿದೆ. ಇನ್ನೂ ಸಿನಿಮಾದ ಅನ್‌ಲೈನ್‌ ಟಿಕೆಟ್‌ ಬುಕಿಂಗ್‌ ಶುರುವಾಗಿದ್ದು, ತುಂಬಾ ಸ್ಪೀಡ್‌ಲ್ಲಿ ಟಿಕೆಟ್‌ಗಳೂ ಮಾರಾಟ ಆಗುತ್ತಿವೆ.

-masthmagaa.com

Contact Us for Advertisement

Leave a Reply