ಕತ್ತಲಲ್ಲಿ ಮುಳುಗಿದ ಅಫ್ಘಾನಿಸ್ತಾನ! ತಾಲಿಬಾನಿಗಳೇ ಕಾರಣನಾ..?

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಟೇಕೋವರ್ ಬಳಿಕ ಆರ್ಥಿಕ ಸಂಕಷ್ಟ ಶುರುವಾಗಿದೆ. ಇದ್ರ ನಡುವೆಯೇ ಅಫ್ಘನ್ ಜನತೆಗೆ ಹೊಸ ಸವಾಲು ಎದುರಾಗಿದೆ. ರಾಜಧಾನಿ ಕಾಬೂಲ್​ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪವರ್ ಕಟ್ ಆಗಿದ್ದು ಕಂಡು ಬಂತು. ಪಕ್ಕದ ಉಜ್ಬೇಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಕರೆಂಟ್ ಸಪ್ಲೈ ಆಗುತ್ತೆ. ಆದ್ರೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ಉಜ್ಬೇಕಿಸ್ತಾನ ಅಫ್ಘಾನಿಸ್ತಾನಕ್ಕೆ ಕರೆಂಟ್ ಸಪ್ಲೈ ಮಾಡೋದು ನಿಲ್ಲಿಸಿದೆ. ಇದ್ರಿಂದಾಗಿ ಅಫ್ಘಾನಿಸ್ತಾನದಲ್ಲಿ ಕರೆಂಟ್ ಪ್ರಾಬ್ಲಂ ಶುರುವಾಗಿದೆ. ಅಫ್ಘಾನಿಸ್ತಾನದಲ್ಲಿ ಇಂಧನ ಪೂರೈಸೋ
ದಾ ಅಫ್ಘಾನಿಸ್ತಾನ್ ಬ್ರೆಶ್ನಾ ಶೇರ್​ಕತ್​​ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ಕೆಲ ತಾಂತ್ರಿಕ ಕಾರಣಗಳಿಂದ ಹೀಗಾಗಿದೆ ಅಷ್ಟೆ.. ಸರಿ ಹೋಗುತ್ತೆ ಅಂತ ಹೇಳಿದೆ. ಆದ್ರೆ ಇವೆಲ್ಲ ಸುಳ್ಳು.. ಈ ಪವರ್ ಪ್ರಾಬ್ಲಂಗೆ ತಾಲಿಬಾನಿಗಳೇ ಕಾರಣ.. ಮಧ್ಯ ಏಷ್ಯಾದ ದೇಶಗಳಾದ ಉಜ್ಬೇಕಿಸ್ತಾನ, ತಜಕಿಸ್ತಾನ, ತುರ್ಕಮೆನಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ 80 ಪರ್ಸೆಂಟ್​​ನಷ್ಟು ವಿದ್ಯುತ್ ಪೂರೈಕೆಯಾಗುತ್ತೆ. ಆದ್ರೆ ತಾಲಿಬಾನಿಗಳು ವಿದ್ಯುತ್ ಪೂರೈಕೆದಾರರಿಗೆ ತಾಲಿಬಾನಿಗಳು ಬಾಕಿ ಪಾವತಿಸಿಲ್ಲ. ಹೀಗಾಗಿ ವಿದ್ಯುತ್ ಪೂರೈಕೆ ಬಂದ್ ಆಗಿದೆ ಅಂತ ಕೂಡ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply