ದುರಂತದಲ್ಲಿ ಕಿರುತರೆ ನಟಿ ಚೇತನಾ ರಾಜ್‌ ಅಂತ್ಯ! ಏನಿದು ಫ್ಯಾಟ್‌ ಸರ್ಜರಿ?

masthmagaa.com:

ಫ್ಯಾಟ್‌ ಸರ್ಜರಿಗೆ ಒಳಗಾಗಿದ್ದ ಕಿರುತರೆ ಯುವನಟಿ ಚೇತನಾ ರಾಜ್‌ ಇವತ್ತು ನಿಧನರಾಗಿದ್ದಾರೆ. ಕೊಬ್ಬಿನ ಅಂಶ ಅಂದ್ರೆ ಫ್ಯಾಟ್‌ ಕರಗಿಸಲು ಅವ್ರು ಶಸ್ತ್ರಚಿಕಿತ್ಸೆಗೆ ಅಂತ ಬೆಂಗಳೂರಿನ ಡಾ.ಶೆಟ್ಟೀಸ್‌ ಆಸ್ಪತ್ರೆಗೆ ನೆನ್ನೆ ದಾಖಲಾಗಿದ್ರು. ಈ ವೇಳೆ ಸರ್ಜರಿ ಮಾಡೋವಾಗ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆ ನಿರ್ಲಕ್ಷ್ಯದಿಂದಲೇ ಮಗಳ ಸಾವು ಸಂಭವಿಸಿದೆ. ಅವಳು ಆಸ್ಪತ್ರೆಗೆ ದಾಖಲಾಗಿರೋ ಮಾಹಿತಿ ನಮಗೆ ಇರ್ಲಿಲ್ಲ. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸಹಿ ಪಡೆದಿಲ್ಲ ಅಂತ ಪೋಷಕರು ಆರೋಪಿಸಿದ್ದಾರೆ. ಜೊತೆಗೆ ಈ ಬಗ್ಗೆ ದೂರು ದಾಖಲಿಸೋದಾಗಿ ಕೂಡ ಹೇಳಿದ್ದಾರೆ. 21 ವರ್ಷ ವಯಸ್ಸಿನ ಚೇತನಾ ರಾಜ್‌ ಕಲರ್ಸ್‌ ಕನ್ನಡದ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಮುಂತಾದ ದಾರವಾಹಿ ಮತ್ತು ಕೆಲವು ಸಿನಿಮಾಗಳಲ್ಲಿ ನಟಿಸಿದ್ರು.
ಅಂದ್ಹಾಗೆ ಈ ಫ್ಯಾಟ್‌ ಸರ್ಜರಿ ಅಥವಾ ಲಿಪೋಸಕ್ಷನ್‌ ಅನ್ನೋದು ದೇಹದಲ್ಲಿನ ಹೆಚ್ಚಿನ ಬೊಜ್ಜನ್ನ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯುವ ವಿಧಾನ. ಸೆಲೆಬ್ರಿಟಿಗಳು ಅದ್ರಲ್ಲೂ ವಿಶೇಷವಾಗಿ ಸಿನಿಮಾ ಕಲಾವಿದರು ಬೊಜ್ಜು ಕರಗಿಸೋಕೆ ಈ ಸರ್ಜರಿಯ ಮೊರೆ ಹೋಗ್ತಾರೆ. ಆದ್ರೆ ಚೇತನಾ ರಾಜ್‌ ಅಷ್ಟೊಂದು ಏನು ದಪ್ಪ ಇರ್ಲಿಲ್ಲ ಆದ್ರು ಕೂಡ ಸರ್ಜರಿ ಮಾಡ್ಸೋಕೆ ಮುಂದಾಗಿದ್ರು. ಆಸ್ಪತ್ರೆಯಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದಿರೋದ್ರಿಂದ ಈ ದುರಂತ ಸಂಭವಿಸಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply