ಯುಗಾದಿ ಹಬ್ಬಕ್ಕೆ ಬಂತು ʻಕಾಂತಾರಾ – 2ʼ ಬಿಗ್‌ ಅಪ್‌ಡೇಟ್‌ !

masthmagaa.com:

ಕೆಜಿಎಫ್‌, ಕಾಂತಾರ ಸಿನಿಮಾಗಳಿಂದ ಸಾಕಷ್ಟು ಜನಪ್ರಿಯತೆ ಗಳಿಸಿರುವ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ ಕಾಂತಾರ ಸಿನಿಮಾದ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿರುವ ರಿಷಬ್ ಶೆಟ್ಟಿ ಯುಗಾದಿ ಹಬ್ಬದ ದಿನದ ಅಂಗವಾಗಿ ತಮ್ಮ ಅಭಿಮಾನಿಗಳಿಗೆ ಕಾಂತಾರ -2 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್‌ ಶೆಟ್ಟಿ ತಮ್ಮಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಂತಾರ -2 ಕುರಿತು ಪೋಸ್ಟ್ ಮಾಡಿದ್ದಾರೆ. ರಿಷಬ್‌ ಶೆಟ್ಟಿ ಹಾಗೂ ತಂಡದ ಫೋಟೋ ಹಂಚಿಕೊಂಡು, ʻಯುಗಾದಿ ಶುಭಸಂಧರ್ಭದಲ್ಲಿ `ಕಾಂತಾರ’ 2ನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಹೇಳಲು ಸಂತೋಷಪಡುತ್ತೇವೆ. ಪ್ರಕೃತಿ ಜೊತೆಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮುಂದೆ ತರಲಿದ್ದೇವೆʼ ಎಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಇನ್ನೂ ಪೋಸ್ಟ್‌ನಲ್ಲಿ ಕಾಂತಾರ ಸಿನಿಮಾದ ಎಲ್ಲಾ ನಟರ ಹೆಸರನ್ನು ಟ್ಯಾಗ್ ಮಾಡಲಾಗಿದೆ. ರಿಷಬ್ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಕಾಂತಾರ-2ಗಾಗಿ ಕಾಯುತ್ತಿದ್ದೀವಿ ಎಂದು ಹೇಳುತ್ತಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಕಾಂತಾರ ಪಾರ್ಟ್-2 ಹೇಗಿರಲಿದೆ, ಯಾವಾಗ ರಿಲೀಸ್ ಆಗಲಿದೆ ಎನ್ನುವ ಹೆಚ್ಚಿನ ಮಾಹಿತಿ ಇನ್ನಷ್ಟು ಬಹಿರಂಗವಾಗಬೇಕಿದೆ.

-masthmagaa.com

Contact Us for Advertisement

Leave a Reply