ಹರಿಯಾಣದ ಕರ್ನಲ್​​ನಲ್ಲಿ ರೈತರ ಮೆರವಣಿಗೆ: ಜಲಫಿರಂಗಿ ಪ್ರಯೋಗ

masthmagaa.com:

ಹರಿಯಾಣದಲ್ಲಿ ಆಗಸ್ಟ್​​ 28ರಂದು ಪ್ರತಿಭಟನಾಕಾರರ ಮೇಲೆ ನಡೆದ ಲಾಠಿಚಾರ್ಜ್ ವಿರೋಧಿಸಿ, ಕರ್ನಲ್​​​ನಲ್ಲಿ ಇವತ್ತು ಕಿಸಾನ್ ಮಹಾಪಂಚಾಯತ್ ನಡೆಸಲಾಗಿದೆ. ಅದ್ರಲ್ಲಿ ಸಾವಿರಾರು ರೈತರು ಭಾಗಿಯಾಗಿದ್ರು. ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಲಾಗಿತ್ತು. ಆದ್ರೆ ಇವತ್ತು ಮಹಾಪಂಚಾಯತ್​​ಗೆ ಮಾತ್ರವೇ ಪೊಲೀಸರು ಅನುಮತಿ ನೀಡಿದ್ರು. ಆದ್ರೆ ರೈತರು ನಂತರದಲ್ಲಿ ಮೆರವಣಿಗೆಗೆ ಮುಂದಾದ್ರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಈ ವೇಳೆ ಕಿಸಾನ್ ಪಂಚಾಯತ್ ನೇತೃತ್ವ ವಹಿಸಿದ್ದ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಮತ್ತು ಭಾರತ್ ಕಿಸಾನ್ ಯೂನಿಯನ್​​ನ ನಾಯಕ ರಾಕೇಶ್ ಟಿಕೈತ್​ ಮತ್ತು ಇತರೆ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply