ಹರಿಯಾಣದ ಕರ್ನಲ್​​ನಲ್ಲಿ ಮೊಬೈಲ್ ಇಂಟರ್​ನೆಟ್​, ಎಸ್​ಎಂಎಸ್​ ಬಂದ್!

masthmagaa.com:

ಆಗಸ್ಟ್​ 28ರಂದು ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್​ ಖಂಡಿಸಿ, ರೈತರು ಕರ್ನಲ್​ನ ಮಿನಿ ಸೆಕ್ರೆಟರಿಯೇಟ್​ ಬಳಿ ಒಟ್ಟಾಗಿದ್ದಾರೆ. ಹೀಗಾಗಿ ಕರ್ನಲ್ ಜಿಲ್ಲೆಯಲ್ಲಿ ಮೊಬೈಲ್​​ ಇಂಟರ್​​ನೆಟ್ ಮತ್ತು ಎಸ್​​ಎಂಎಸ್​​ ಸೇವೆಯನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ. ಆದ್ರೆ ಇವತ್ತು ಪ್ರತಿಕ್ರಿಯಿಸಿರೋ ಪ್ರತಿಭಟನಾಕಾರರ ನೇತೃತ್ವ ವಹಿಸಿರೋ ಭಾರತ್ ಕಿಸಾನ್ ಯೂನಿಯನ್​​ನ ನಾಯಕ ರಾಕೇಶ್ ಟಿಕೈತ್​, ಸರ್ಕಾರದ ಜೊತೆಗೆ ಇವತ್ತು ನಡೆಸಿದ ಮಾತುಕತೆ ವಿಫಲವಾಗಿದೆ. ಸಿಂಘು ಮತ್ತು ಟಿಕ್ರಿ ಗಡಿಯಂತೆ ಇಲ್ಲೂ ಕೂಡ ನಾವು ಶಾಶ್ವತವಾದ ಪ್ರತಿಭಟನೆ ಮಾಡ್ಬೇಕಾಗುತ್ತೆ ಅಂತ ಹೇಳಿದ್ದಾರೆ. ಆಗಸ್ಟ್​ 28ರಂದು ನಡೆದಿದ್ದ ಲಾಠಿಚಾರ್ಜ್​​​​ಗೂ ಮುನ್ನ ರಸ್ತೆ ಬ್ಲಾಕ್ ಮಾಡಿದ್ರೆ, ಮುಂದೆ ಬಂದ್ರೆ ಅಂಥವರ ತಲೆ ಒಡೀರಿ ಅಂತ ಹೇಳಿಕೆ ಕೊಟ್ಟಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾರನ್ನು ಸಸ್ಪೆಂಡ್ ಮಾಡ್ಬೇಕು, ಲಾಠಿಚಾರ್ಜ್​ ಸಂತ್ರಸ್ತ ರೈತರಿಗೆ ನ್ಯಾಯ ನೀಡಬೇಕು ಅನ್ನೋದು ರೈತರ ಒತ್ತಾಯವಾಗಿದೆ. ಈ ಘಟನೆಯಲ್ಲಿ ಓರ್ವ ರೈತ ಪ್ರಾಣ ಕಳ್ಕೊಂಡಿದ್ರು. ಆದ್ರೆ ಪೊಲೀಸರು ಆತ ಹೃದಯಾಘಾತಕ್ಕೆ ಒಳಗಾಗಿದ್ದು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply