ಸ್ಟಾರ್‌ ಪ್ರಚಾರಕರ ಲಿಸ್ಟ್‌ ರಿಲೀಸ್‌ ಮಾಡಿದ ಕಾಂಗ್ರೆಸ್‌ ಹಾಗೂ ಬಿಜೆಪಿ!

masthmagaa.com:

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನ ರಿಲೀಸ್‌ ಮಾಡಿದೆ. ಒಟ್ಟು 40 ಲೀಡರ್‌ಗಳು ರಾಜ್ಯಾದ್ಯಾಂತ ಬಿಜೆಪಿ ಪ್ರಚಾರ ಮಾಡಲಿದೆ. ಲಿಸ್ಟ್‌ನಲ್ಲಿ ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಯೋಗಿ ಆದಿತ್ಯನಾಥ್‌, ನಿರ್ಮಲಾ ಸೀತಾರಾಮನ್‌, ಸ್ಮೃತಿ ಇರಾನಿ, ಕೆ ಅಣ್ಣಾಮಲೈ, ದೇವೆಂದ್ರ ಫಡ್ನವೀಸ್‌ ಜೊತೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರ ಹೆಸರುಗಳು ಲಿಸ್ಟ್‌ನಲ್ಲಿದೆ. ಇವರ ಜೊತೆ ಟಿಕೆಟ್‌ ವಂಚಿತರಾದ ಅರವಿಂದ್‌ ಲಿಂಬಾವಳಿ, ಕೆ ಎಸ್‌ ಈಶ್ವರಪ್ಪ, ಕೋಟಾ ಶ್ರೀನಿವಾಸ್‌ ಪೂಜಾರಿ ಹೆಸರಿರೋದು ವಿಶೇಷ. ಇತ್ತ ಕಾಂಗ್ರೆಸ್‌ ಕೂಡ ಬಿಜೆಪಿಗಿಂತ ಯಾವುದ್ರಲ್ಲೂ ಕಡಿಮೆ ಇಲ್ಲ ಅನ್ನೊ ತರ ತಮ್ಮ ಸ್ಟಾರ್‌ ಪ್ರಚಾರಕರ ಲಿಸ್ಟ್‌ನ್ನ ರಿಲೀಸ್‌ ಮಾಡಿದೆ.‌ ಕಾಂಗ್ರೆಸ್‌ ಕೂಡ 40 ಸ್ಟಾರ್‌ ಪ್ರಚಾರಕರನ್ನ ಹೆಸರನ್ನ ರಿಲೀಸ್‌ ಮಾಡಿದ್ದು, ಮಾಜಿ ಸಂಸದೆ ಹಾಗೂ ನಟಿ ರಮ್ಯಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ರಾಜ್ಯದ ಪ್ರಮುಖ ಕಾಂಗ್ರೆಸ್‌ ನಾಯಕರ ಹೆಸರುಗಳಿವೆ. ಜೊತೆಗೆ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ಅವರಿಗೂ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಇವರ ಜೊತೆಗೆ ಶಶಿ ತರೂರ್‌, ನಟಿ ಉಮಾಶ್ರೀ ಹಾಗೂ ಹಾಸ್ಯನಟ ಸಾಧೂಕೋಕಿಲ ಅವ್ರು ಈ ಲಿಸ್ಟ್‌ನಲ್ಲಿದ್ದಾರೆ. ಅಂದ್ಹಾಗೆ ಈ ಸ್ಟಾರ್‌ ಪ್ರಚಾರಕರು ಯಾರಾದ್ರೂ ಆಗಿರಬಹುದು, ಇವ್ರನ್ನ ಅವರ ಪಾಪ್ಯುಲಾರಿಟಿ ಮೇಲೆ ಪಕ್ಷ ಆಯ್ಕೆ ಮಾಡುತ್ತೆ. ಇನ್ನು ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಪ್ರಚಾರಕ್ಕೆ ಮಾಡುವ ವೈಯಕ್ತಿಕ ವೆಚ್ಚವನ್ನ 70 ಲಕ್ಷ ರೂಪಾಯಿಗೆ ನಿಗದಿ ಪಡಿಸಲಾಗಿದೆ. ಆದ್ರೆ ಈ‌ ಸ್ಟಾರ್‌ಗಳು ಮಾಡುವ ಪ್ರಚಾರಕ್ಕಾಗಿ ವ್ಯಯಿಸಿದ ಹಣವನ್ನ ಅಭ್ಯರ್ಥಿಗಳ ವೆಚ್ಚಕ್ಕೆ ಸೇರಿಸಲ್ಲ. ಈ ವೆಚ್ಚವನ್ನ ಪಕ್ಷ ನೀಡುತ್ತೆ. ಇನ್ನು ಪ್ರಧಾನಿ ಅವ್ರು ಸ್ಟಾರ್‌ ಪ್ರಚಾರಕರಾದ್ರೆ, ಅವರ ಭದ್ರತೆ ವೆಚ್ಚ ಸೇರಿ ಬುಲೆಟ್‌ ಪ್ರೂಫ್‌ ವಾಹನವನ್ನ ಸರ್ಕಾರವೇ ನೀಡುತ್ತೆ. ಪ್ರಧಾನಿ ಅವರ ಪ್ರಚಾರದ ವೆಚ್ಚವನ್ನ ಪಕ್ಷದ ವೆಚ್ಚದಲ್ಲಾಗಲೀ ಅಥ್ವಾ ವೈಯಕ್ತಿಕ ಅಭ್ಯರ್ಥಿಯ ವೆಚ್ಚದಲ್ಲಾಗಲೀ ಇನ್‌ಕ್ಲೂಡ್‌ ಮಾಡಲ್ಲ.

-masthmagaa.com

Contact Us for Advertisement

Leave a Reply