ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಜಾತಿ ಗಣತಿ ಕೂಗು!

masthmagaa.com:

ಬಿಹಾರ ಸರ್ಕಾರ ಜಾತಿಗಣತಿಯ ವರದಿಯನ್ನ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಕೂಗು ಕೇಳಿಬಂದಿವೆ. ಅಲ್ದೇ ಜಾತಿಗಣತಿ ವರದಿ ಸಲ್ಲಿಸಲು ಕಾರ್ಯ ಚಟುವಟಿಕೆಗಳು ಕೂಡ ಗರಿಗೆದರಿವೆ. ಹಿಂದುಳಿದ ವರ್ಗಗಳ ಆಯೋಗ, ಹಿಂದಿನ ಕಾಂತರಾಜ್ ಸಮಿತಿಯ ವರದಿಯ ಅಂಕಿ- ಅಂಶವನ್ನ ಆಧರಿಸಿ ಹೊಸ ರಿಪೋರ್ಟ್‌ ಸಿದ್ಧಪಡಿಸಲಿದೆ. ನವಂಬರ್‌ ತಿಂಗಳ ಎರಡನೇ ಅಥ್ವಾ ಮೂರನೇ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ವರದಿ ಸಿದ್ದಪಡಿಸಲು 5 ಮಂದಿ ತಜ್ಙರನ್ನ ನೇಮಕ ಮಾಡಲಾಗಿದ್ದು, ಈ ವಾರದಿಂದಲೇ ಮಾಹಿತಿ ಸಂಗ್ರಹ ಆರಂಭವಾಗಲಿದೆ.

-masthmagaa.com

Contact Us for Advertisement

Leave a Reply