ಕನ್ನಡಪರ ಸಂಘಟನೆ, ರೈತರು ಹಾಗೂ ಹೋರಾಟಗಾರರ ಮೇಲಿನ ಕೇಸ್ ವಾಪಾಸ್‌ ಪಡೆಯಲು ನಿರ್ಧರಿಸಿದ ರಾಜ್ಯ ಸರ್ಕಾರ!

masthmagaa.com:

ಕನ್ನಡಪರ ಸಂಘಟನೆ, ರೈತರು ಹಾಗೂ ಹೋರಾಟಗಾರರ ಮೇಲಿನ ವಿಚಾರಣೆ ಹಂತದಲ್ಲಿರುವ ಕೇಸ್​​ಗಳನ್ನು​ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಸ್​​ಗಳನ್ನು ಹಿಂಪಡೆಯುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ ಅಂತ ಕಾನೂನು ಸಚಿವ ಹೆಚ್​ಕೆ ಪಾಟೀಲ್​ ತಿಳಿಸಿದ್ದಾರೆ. ಇದೇ ವೇಳೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನಿಂದ ಕೆಲವು ತಿದ್ದುಪಡಿಗೆ ಸೂಚಿಸಲಾಗಿದೆ. ಅವುಗಳಲ್ಲಿ 2 ತಿದ್ದುಪಡಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಅಂತ ಪಾಟೀಲ್ ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ಪದ್ಧತಿಯ ಕೆಲವು ತಿದ್ದುಪಡಿಗೆ ಮಾತ್ರ ಒಪ್ಪಿಗೆ ಸೂಚಿಸಲಾಗಿದೆ. ಉಳಿದವು ಜಿಎಸ್​​ಟಿ ಕೌನ್ಸಿಲ್​ನಲ್ಲಿ ಮರು ಪ್ರಸ್ತಾಪ ಆಗಿ ಚರ್ಚೆಗೆ ಬರಲಿವೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply