‘ಇನ್ಮುಂದೆ ಲಾಕ್​ಡೌನ್ ಬಗ್ಗೆ ಯೋಚನೆ ಮಾಡಬೇಡಿ’: ಸಿಎಂ ಖಡಕ್ ಸೂಚನೆ

masthmagaa.com:

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಇವತ್ತು ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ ಸಿಎಂ ಬಿ.ಎಸ್​. ಯಡಿಯೂರಪ್ಪ, ಇನ್ಮುಂದೆ ಲಾಕ್​ಡೌನ್​ ಬಗ್ಗೆ ಯೋಚನೆ ಮಾಡಬೇಡಿ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಕೊರೋನಾ ಸೋಂಕನ್ನು ನಿಯಂತ್ರಿಸಿ ಅಂತ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ನಾಳೆಯಿಂದ ಬೆಂಗಳೂರು ಸೇರಿದಂತೆ ಯಾವ ಜಿಲ್ಲೆಯಲ್ಲೂ ಲಾಕ್​ಡೌನ್ ಇರುವುದಿಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಬೆಂಗಳೂರು ಸೇರಿದಂತೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತೆ ಲಾಕ್​ಡೌನ್ ಜಾರಿಯಾಗುತ್ತಾ ಅನ್ನೋ ಅನುಮಾನಕ್ಕೆ ತೆರೆ ಎಳೆದಿದ್ದಾರೆ.

ಸೋಂಕಿನ ಹಾವಳಿ ಹೆಚ್ಚಿರುವ ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಿಂದ ಹೆಚ್ಚು ಜನ ಬರುತ್ತಿರುವುದರಿಂದ ಬೆಂಗಳೂರಿನಲ್ಲಿ ಸೋಂಕು ಜಾಸ್ತಿಯಾಗ್ತಿದೆ. ಬೆಂಗಳೂರಿನ 8 ವಲಯಗಳಲ್ಲಿ ತಲಾ ಒಬ್ಬೊಬ್ಬ ಸಚಿವರು ಮತ್ತು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸ್ಯಾಂಪಲ್​ಗಳನ್ನು ನೀಡಿದ 24 ಗಂಟೆಗಳಲ್ಲಿ ವರದಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳು ಶೇ. 50ರಷ್ಟು ಹಾಸಿಗೆ ನೀಡಲು, ತಜ್ಞ ವೈದ್ಯರನ್ನು ನೀಡಲು ಮುಂದಾಗಿರೋದು ಒಳ್ಳೆಯ ಸಂಗತಿ ಎಂದರು.

ಕೊರೋನಾ ನಿಯಂತ್ರಣಕ್ಕೆ ವಿಪಕ್ಷ ನಾಯಕರು ಅಗತ್ಯ ಸಲಹೆಗಳನ್ನ ನೀಡಬೇಕು. ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಜ್ಯದಲ್ಲಿ ಆ್ಯಂಬುಲೆನ್ಸ್ ಕೊರತೆ ಇದೆ ಅಂತ ಹೇಳಲಾಗ್ತಿದೆ. ಆದ್ರೆ ಅಗತ್ಯವಾಗಿರುವ ಆ್ಯಂಬುಲೆನ್ಸ್​ಗಳನ್ನು ವ್ಯವವ್ಥೆ ಮಾಡಲಾಗಿದೆ. ರಾಜ್ಯದ ಜನ, ವಿಪಕ್ಷ ನಾಯಕರು ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಕರಿಸಬೇಕು ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡರು.

-masthmagaa.com

Contact Us for Advertisement

Leave a Reply