masthmagaa.com:

ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಅಮಿತ್ ಶಾ ನಿವಾಸದಲ್ಲಿ ಮಾತುಕತೆ ನಡೆಸಿದ್ರು. ವರಿಷ್ಠರ ಜೊತೆ ಚರ್ಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್​ವೈ, ‘ವರಿಷ್ಠರ ಜೊತೆ 1 ಗಂಟೆ ಸಭೆ ನಡೀತು. ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶ ಕೇಂದ್ರದ ನಾಯಕರಿಗೆ ಖುಷಿ ತಂದಿದೆ. ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನ ಕಳಿಸಿಕೊಡಿ, ಕ್ಲಿಯರ್ ಮಾಡಿ ಕಳಿಸ್ತೀವಿ. ಎರಡೂ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬಗ್ಗೆ ಶೀಘ್ರದಲ್ಲೇ ಶುಭ ಸುದ್ದಿ, ಸಿಹಿ ಸುದ್ದಿ ಸಿಗಲಿದೆ. ನನಗಂತೂ ಇವತ್ತಿನ ಸಭೆ ಸಮಾಧಾನ ತಂದಿದೆ, ತೃಪ್ತಿ ತಂದಿದೆ. ಫೈನಲ್ ಏನು ಅನ್ನೋದನ್ನ ವರಿಷ್ಠರು ಹೇಳ್ತಾರೆ’ ಅಂತ ಹೇಳಿದ್ರು. ಇನ್ನು ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಅಂತ ಕೇಳಿದ ಪ್ರಶ್ನೆಗೆ ಗುಟ್ಟು ಬಿಟ್ಟುಕೊಡದ ಸಿಎಂ ಯಡಿಯೂರಪ್ಪ, ‘ವೇಯ್ಟ್ ಮಾಡಿ. ವರಿಷ್ಠರು ಏನು ಅಂತ ಹೇಳ್ತಾರೆ’ ಅಂದ್ರು. ಇನ್ನು ಸಂಪುಟ ವಿಸ್ತರಣೆ ಮತ್ತು ಪುನಾರಚನೆಗೆ ಸಂಬಂಧಿಸಿದಂತೆ ಇವತ್ತಿನ ಸಭೆಯೇ ಕೊನೇ ಸಭೆ ಆಗಲಿದೆ. ಇನ್ಮುಂದೆ ಯಾವುದೇ ಸಭೆ ನಡೆಯಲ್ಲ ಅಂತಾನೂ ಹೇಳಿದ್ರು. ಕೊನೇದಾಗಿ ಮುಂದಿನ 3 ವರ್ಷಗಳ ಅವಧಿಗೆ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರಾ ಅಂತ ಕೇಳಿದ ಪ್ರಶ್ನೆಗೆ, ‘ಅದಕ್ಕೆ ನೀವೇ ಉತ್ತರ ಕೊಡಬೇಕು’ ಅಂತ ಸಿಎಂ ಯಡಿಯೂರಪ್ಪ ಹೇಳಿದ್ರು.

-masthmagaa.com

Contact Us for Advertisement

Leave a Reply