ಕೇಂದ್ರದ ವಿರುದ್ಧ ಗುಡುಗಿದ ಸಿಎಂ, ಡಿಸಿಎಂ: ಫೆಬ್ರವರಿ 7ಕ್ಕೆ ಧರಣಿ!

masthmagaa.com:

ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ವಿಧಾನಸೌಧದಲ್ಲಿ ಜಾಯಿಂಟ್‌ ಪ್ರೆಸ್‌ ಮೀಟಿಂಗ್‌ ಮಾಡಿದ್ದಾರೆ. ಇದ್ರಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ್ಬೇಕಾಗಿರೋ ಹಣ ನೀಡದೇ ಇರೋದ್ರಿಂದ ಫ್ರೆಬ್ರವರಿ 7ಕ್ಕೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಧರಣಿ ಕೂರ್ತೇವೆ ಅಂದಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ಹಣ ನೀಡೋದಿರ್ಲಿ, ಕೇಂದ್ರದ ಮಾನದಂಡದ ಪ್ರಕಾರ ಆದ್ರೂ ಹಣ ಕೊಡ್ಬೇಕಿತ್ತು. ಆದ್ರೆ ಕೇಂದ್ರ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಮಾಡ್ತಿದೆ. ನಮ್ಮ ರಾಜ್ಯ 4.3 ಲಕ್ಷ ಕೋಟಿ ಟ್ಯಾಕ್ಟ್‌ ಕೊಡುತ್ತೆ. ಟ್ಯಾಕ್ಸ್‌ ಕಲೆಕ್ಷನ್‌ನಲ್ಲಿ ದೇಶಕ್ಕೇ ಎರಡನೇ ಸ್ಥಾನದಲ್ಲಿದ್ದೇವೆ. ಆದ್ರೆ ತೆರಿಗೆ ಹಂಚಿಕೆಯಲ್ಲಿ ಮಾತ್ರ ರಾಜ್ಯಕ್ಕೆ ಮೋಸ ಆಗ್ತಿದೆ. ಅದ್ರಿಂದ ರಾಜ್ಯಕ್ಕೆ 45 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣ ನಷ್ಟ ಆಗ್ತಿದೆ. 100 ರೂಪಾಯಿ ಕೊಡೋರಿಗೆ ವಾಪಸ್‌ 12-13 ರೂಪಾಯಿ ಕೊಡ್ತಿದ್ದಾರೆ. ಆದ್ರೂ ರಾಜ್ಯ ಬಿಜೆಪಿ ನಾಯಕರು ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ಅಂತಾರೆ. ಈಗ ನಮಗೆ ಬೇರೆ ದಾರಿ ಇಲ್ದೇ ಧ್ವನಿ ಎತ್ತಲೇ ಬೇಕಾದ ಅನಿವಾರ್ಯತೆ ಬಂದಿದೆ. ಅದಕ್ಕೇ ಧರಣಿ ಕೂರೋಕೆ ತೀರ್ಮಾನ ಮಾಡಿದ್ದೇವೆ ಅಂದಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಸುಳ್ಳುಗಳಿಗೆ ನೀವ್ಯಾರು ದಾರಿ ತಪ್ಪಲ್ಲ ಅಂದುಕೊಂಡಿದ್ದೇನೆ ಅಂತೇಳಿ ಮೋದಿಯವ್ರಿಗೂ ಟಾಂಗ್‌ ಕೊಟ್ಟಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್‌ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಬರ ಪರಿಹಾರ ಹಣವನ್ನೇ ಕೇಂದ್ರ ಬಿಡುಗಡೆ ಮಾಡಿಲ್ಲ ಅಂತೇಳಿ, ಫೆಬ್ರವರಿ 7ರ ಧರಣಿಗೆ ಪಾಲ್ಗೊಳ್ಳಿ ಅಂತ, ರಾಜ್ಯದ ಸಚಿವರು, ಶಾಸಕರು ಹಾಗೂ ಸಂಸದರಿಗೆ ಮನವಿ ಮಾಡಿದ್ದಾರೆ.

ಇನ್ನು ಬಜೆಟ್‌ ವಿಶೇಷ ಅಧಿವೇಶನದಲ್ಲೂ ಇದೇ ವಿಚಾರವಾಗಿ ವಾದ ವಿವಾದ ನಡೆದಿದೆ. ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಕರ್ನಾಟಕ ಸರ್ಕಾರಕ್ಕೆ ಫಂಡ್ಸ್‌ ಕೊಡದೇ ಇರೋ ಬಗ್ಗೆ ಕೇಂದ್ರ ಸರಿಯಾದ ಕಾರಣಗಳನ್ನ ನೀಡಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇದಕ್ಕೆ ರಿಪ್ಲೈ ಮಾಡಿರೋ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ನಿಮ್ಮ ರಾಜ್ಯದ ಬಜೆಟ್‌ಗೆ ನಿಮ್ಮ ಖರ್ಚುಗಳನ್ನ ತಡ್ಕೊಳ್ಳೋ ಶಕ್ತಿ ಇಲ್ಲ ಅಂದ್ರೆ, ಅದಕ್ಕೆ ನಾವು ಹೊಣೆಗಾರರಲ್ಲ ಅಂದಿದ್ದಾರೆ. ಆ ಮೂಲಕ ಇಂಡೈರೆಕ್ಟಾಗಿ ಇದು ರಾಜ್ಯದ ಐದು ಗ್ಯಾರಂಟಿ ಯೋಜನೆಗಳಿಂದ ಬಂದಿರೋ ಪರಿಸ್ಥಿತಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply