ಅಕ್ಕಿ ಪೂರೈಕೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲು ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ!

masthmagaa.com:

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಕಂಟಿನ್ಯೂ ಆಗಿದೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವ್ರನ್ನ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಜೂನ್‌ 21ರಂದು ಅಂದ್ರೆ ನಾಳೆ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಕುರಿತು ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಮಾಹಿತಿ ನೀಡಿದ್ದು, ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅರನ್ನು ಭೇಟಿಯಾಗುತ್ತಿದ್ದೇನೆ ಅಂತ ಹೇಳಿದ್ದಾರೆ. ಇದೇ ವೇಳೆ ಆಹಾರ ಸಚಿವ ಮುನಿಯಪ್ಪ ಕೂಡ ಕೇಂದ್ರ ಆಹಾರ ಸಚಿವರನ್ನ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ಮುನಿಯಪ್ಪ ಮನವಿ ಮಾಡಲಿದ್ದಾರೆ ಅಂತ ಸಿದ್ದರಾಮಯ್ಯ​ ತಿಳಿಸಿದ್ದಾರೆ. ಇನ್ನೊಂದ್‌ ಕಡೆ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಪೂರೈಸೋಕೆ ನಿರಾಕರಿಸಿದೆ ಅಂತ ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಟ್ಟೆ ಸೌಟು ಹಿಡಿದು ಬಂದಿದ್ದ ಕಾರ್ಯಕರ್ತರು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಕಡೆ ಕೇಂದ್ರ ಎಷ್ಟೇ ವಂಚನೆ ಮಾಡಿದ್ರು ನಾವು ಜನರಿಗೆ ನೀಡಿರೋ ಭರವಸೆ ಈಡೇರಿಸುತ್ತೇವೆ ಅಂತ ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಮತ್ತೊಂದ್‌ ಕಡೆ ಕೇಂದ್ರ ದ್ವೇಷದ ರಾಜಕಾರಣ ಮಾಡ್ತಿದ್ದು, ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಿದಂತೆ ಕುತಂತ್ರ ಮಾಡಿದೆ ಅಂತ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ಇದೆಲ್ಲದ್ರ ಮಧ್ಯೆ, ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್‌ ಕೆಟ್ಟ ರಾಜಕಾರಣ ಮಾಡೋದು ಬೇಡ. ಈ ವಿಚಾರದಲ್ಲಿ ತಮ್ಮ ವೈಫಲ್ಯವನ್ನ ಮುಚ್ಚಿಕೊ‍ಳ್ಳಲು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನ ಎಳೆದು ತರೋಕೆ ಕಾಂಗ್ರೆಸ್ ಹರ ಸಾಹಸ ಮಾಡ್ತಿದೆ ಅಂತ‌ ಮಾಜಿ ಶಾಸಕ ಸಿಟಿ ರವಿ ಟೀಕಿಸಿದ್ದಾರೆ. ಇನ್ನು ಅಕ್ಕಿ ಜಗಳಕ್ಕೆ ಪ್ರತಿಕ್ರಿಯಿಸಿರೋ ಬಿಜೆಪಿ ನಾಯಕ ಆರ್‌. ಅಶೋಕ್‌ ವಿಧಾನಸಭೆ ಚುನಾವಣೆಯಲ್ಲಿ ಚಾಣಕ್ಯ ತಂತ್ರ ಆ ತಂತ್ರ ಈ ತಂತ್ರ ಮಾಡಿ ಗೆದ್ದಿದಿವಿ ಅಂತ ಹೇಳುವ ಕಾಂಗ್ರಸ್‌, ಅಕ್ಕಿ ವಿಚಾರದಲ್ಲೂ ಅದೇ ರೀತಿ ಮಂತ್ರ ಉಪಯೋಗಿಸಲಿ…ಹೆಂಗೂ ಮಾಟ ಮಂತ್ರದಲ್ಲಿ ಡಿಕೆ ಶಿವಕುಮಾರ್‌ ಅವ್ರು ಫೇಮಸ್‌. ಹೀಗಾಗಿ ಅದಕ್ಕೆ ಮಾಟ ಮಂತ್ರ ಏನಾದ್ರು ಮಾಡ್ಸಿ ಅಕ್ಕಿ ಬರೋ ತರ ಏನಾದ್ರೂ ಮಾಡ್ಕೊಳಿ ಅಂತ ಅಶೋಕ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply