ದೇಶದ ಗಮನ ಸೆಳೆದ ಕರ್ನಾಟಕದ ಈ ಪೊಲೀಸ್..! ಸೆಲ್ಯೂಟ್ ಹೊಡೆಯಲೇಬೇಕು…

ಕೇಂದ್ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಂದ ಬಳಿಕ ಬರೀ ದಂಡ ವಸೂಲಿ ಮಾಡಿಯೇ ಟ್ರಾಫಿಕ್ ಪೊಲೀಸರು ಸುದ್ದಿಯಾಗ್ತಿದ್ದಾರೆ. ಆದ್ರೆ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ರಸ್ತೆಯಲ್ಲಿ ನಿಂತಿದ್ದ ನೀರನ್ನು ತೆಗೆದು ಸುದ್ದಿಯಾಗಿದ್ದಾರೆ. ಅಕ್ಷಯ್ ವಂಡುರೆ ಎಂಬ ಟ್ವಿಟ್ಟರ್ ಅಕೌಂಟ್‍ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ಇಂಥಾ ಪೊಲೀಸರು ನಮ್ಮ ಸಮಾಜಕ್ಕೆ ಆದರ್ಶ. ಇಂಥವರಿಗೆ ಸೆಲ್ಯೂಟ್ ಹೊಡೆಯಲೇಬೇಕು ಎಂದು ಬರೆಯಲಾಗಿದೆ. ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಯೊಂದು ಫುಲ್ ಜಲಾವೃತವಾಗಿತ್ತು. ಈ ವಿಡಿಯೋದಲ್ಲಿ ಪೊಲೀಸ್ ಒಬ್ಬರು ಹಾರೆ ಹಿಡಿದು, ರಸ್ತೆಯಲ್ಲಿ ನಿಂತಿದ್ದ ನೀರು ಹರಿದು ಹೋಗಲು ಜಾಗ ಮಾಡುತ್ತಿದ್ದಾರೆ. ದೂರದಿಂದ ಈ ವಿಡಿಯೋ ಶೂಟ್ ಮಾಡಲಾಗಿದ್ದು, ಸಾರ್ವಜನಿಕರಿಂದ ಪೊಲೀಸ್ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಕೆಲವರು ಬೆಂಗಳೂರು ಸಿಟಿ ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿ, ಆ ಪೊಲೀಸ್‍ಗೆ ಪ್ರಶಸ್ತಿ ನೀಡುವಂತೆ ಆಗ್ರಹಿಸಿದ್ದಾರೆ. ಐಪಿಎಸ್ ಅಧಿಕಾರಿ ರೂಪ ಕೂಡ ಪೊಲೀಸ್ ಕಾರ್ಯವನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋವನ್ನು ಸುಮಾರು 34 ಸಾವಿರ ಜನ ವೀಕ್ಷಿಸಿದ್ದು, 2 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

https://twitter.com/AkshayVandure1/status/1177182634687942656

Contact Us for Advertisement

Leave a Reply