ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಗೂ ಕೊರೋನಾ ಸೋಂಕು ಎಂಟ್ರಿ..!

masthmagaa.com:

ಹಾವೇರಿ: ಈವರೆಗೂ ಕೊರೋನಾದಿಂದ ದೂರವಿದ್ದ ಹಾವೇರಿ ಜಿಲ್ಲೆಗೆ ಕೊರೋನಾ ವಕ್ಕರಿಸಿದೆ. ಸವಣೂರಿನ 32 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಏಪ್ರಿಲ್ 29ರಂದು ಮುಂಬೈನಿಂದ ಲಾರಿಯಲ್ಲಿ ಮೂವರು ಸವಣೂರಿಗೆ ಬಂದಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿ ಮನೆಯಲ್ಲೇ ಕ್ವಾರಂಟೈನ್​​ಗೆ ಒಳಪಡಿಸಲಾಗಿತ್ತು. ಮೂವರ ಪೈಕಿ ಒಬ್ಬರ ಪರೀಕ್ಷೆ ವರದಿ ಬಂದಿದ್ದು, ಕೊರೋನಾ ಇರೋದು ದೃಢವಾಗಿದೆ. ಇನ್ನಿಬ್ಬರ ವರದಿ ಇನ್ನಷ್ಟೇ ಬರಬೇಕಿದೆ ಅಂತ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply