ಬಂಡೀಪುರದಲ್ಲಿ ಕಟ್ಟಡ ಕಾಮಗಾರಿ: ಅರಣ್ಯ ಇಲಾಖೆಯಿಂದ Golden Star ಗಣೇಶ್‌ಗೆ ನೋಟೀಸ್

masthmagaa.com:

ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮವಲಯದಲ್ಲಿ ತಾತ್ಕಾಲಿಕ ಕಟ್ಟಡವನ್ನ ನಿರ್ಮಿಸೋಕೆ ಗೋಲ್ಡನ್‌ ಸ್ಟಾರ್‌ ಗಣೇಶ್ ಮುಂದಾಗಿದ್ರು. ಆದ್ರೆ ಇದೀಗ ಸೂಕ್ಷ್ಮ ವಲಯದ ನಿಯಮಗಳನ್ನ ಉಲ್ಲಂಘಿಸಿ ಬೃಹತ್ ಕಟ್ಟಡ ಕಟ್ತಿದಾರೆ ಅಂತ ಆರೋಪ ಕೇಳಿ ಬಂದಿದ್ದು, ಗಣೇಶ್‌ ಅವರಿಗೆ ಅರಣ್ಯ ಇಲಾಖೆ ನೋಟಿಸ್‌ ನೀಡಿದೆ. ತಕ್ಷಣವೇ ಎಲ್ಲ ಕಾಮಗಾರಿಗಳನ್ನ ಸ್ಥಗಿತಗೊಳಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಜಕ್ಕಳ್ಳಿ ಅನ್ನೊ ಗ್ರಾಮದಲ್ಲಿ 1 ಎಕರೆ 24 ಗುಂಟೆ ಜಮೀನನ್ನ ಗಣೇಶ್ ಹೊಂದಿದ್ದಾರೆ. ಮನೆ ಹಾಗೂ ತೋಟಗಾರಿಕೆ ಉದ್ದೇಶಕ್ಕೆ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡೋದಾಗಿ ಬಂಡೀಪುರ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯಿಂದ ಅನುಮತಿ ಪಡೆದಿದ್ದರು. ಆದರೆ ಬೃಹತ್ ಕಟ್ಟಡ ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದ್ದು, ದೊಡ್ಡ ಕಾಂಕ್ರೀಟ್ ಪಿಲ್ಲರ್‌ಗಳನ್ನ ಹಾಕಿದ್ದಾರೆ ಎನ್ನಲಾಗಿದೆ. ಈ ಮೂಲಕ ಸೂಕ್ಷ್ಮವಲಯದ ಮೇಲ್ವಿಚಾರಣಾ ಸಮಿತಿ ಮತ್ತು ನಿರ್ದೇಶಕರ ಕಚೇರಿ ವಿಧಿಸಿರುವ ಷರತ್ತುಗಳನ್ನ, ನಿಯಮಗಳನ್ನ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಕಾಮಗಾರಿಯನ್ನ ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಗಣೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ACF ಅಧಿಕಾರಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

 

-masthmagaa.com

Contact Us for Advertisement

Leave a Reply