ಕೇಂದ್ರದ 23 ನಾಯಿತಳಿಗಳ ಬ್ಯಾನ್‌ ಸುತ್ತೋಲೆಗೆ ಹೈಕೋರ್ಟ್ ಬ್ರೇಕ್!

masthmagaa.com:

23 ಜಾತೀಯ ಸಾಕು ನಾಯಿ ತಳಿಗಳನ್ನ ಕೇಂದ್ರ ಸರ್ಕಾರದ ಬ್ಯಾನ್‌ ಆದೇಶದ ಸುತ್ತೋಲೆಯನ್ನ ರಾಜ್ಯ ಹೈಕೋರ್ಟ್‌ ರದ್ದು ಪಡಿಸಿದೆ. ಬ್ಯಾನ್‌ ಆದೇಶದ ಸುತ್ತೋಲೆ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಎಂ.ನಾಗಪ್ರಸನ್ನ ಅವ್ರ ಏಕ ಸದಸ್ಯ ಪೀಠ, ಪ್ರಾಣಿ ದಯಾ ಸಂಘ ಮತ್ತು ಶ್ವಾನ ತಳಿ ಪ್ರಮಾಣೀಕೃತ ಸಂಸ್ಥೆಗಳ ವಿವರಣೆಯನ್ನ ಕೇಂದ್ರ ಸರ್ಕಾರ ಆಲಿಸಬೇಕು. ನಂತ್ರ ತಿದ್ದುಪಡಿಯ ಮೂಲಕ ಸಮಗ್ರ ಮಾರ್ಗದರ್ಶಿಯೊಂದಿಗೆ ಹೊಸ ಸುತ್ತೋಲೆಯನ್ನ ಹೊರಡಿಸಬೇಕು ಅಂತ ನ್ಯಾಯಪೀಠ ಹೇಳಿದೆ. ಅಂದ್ಹಾಗೆ ಕಳೆದ ಮಾರ್ಚ್‌ 12ರಂದು ಅಮೆರಿಕನ್‌ ಬುಲ್‌ಡಾಗ್‌, ಪಿಟಬುಲ್‌ ಟೆರಿಯರ್‌ ಸೇರಿದಂತೆ 23 ತಳಿಯ ನಾಯಿಗಳು ಮುನುಷ್ಯರಿಗೆ ಅಪಾಯಕಾರಿ ಅಂತೇಳಿ ಅವುಗಳನ್ನ ಬ್ಯಾನ್‌ ಮಾಡಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಹೈಕೋರ್ಟ್‌ ಆ ಸುತ್ತೋಲೆಯನ್ನೆ ರದ್ದು ಪಡಿಸಿದೆ.

-masthmagaa.com

Contact Us for Advertisement

Leave a Reply