ಅಪಹರಣ ಕೇಸ್‌: ಮೇ 14ರವರೆಗೆ ನ್ಯಾಯಾಂಗ ಬಂಧನದಲ್ಲಿ HD ರೇವಣ್ಣ!

masthmagaa.com:

ಅಪಹರಣ ಕೇಸ್‌ನಲ್ಲಿ ಶಾಸಕ ಎಚ್‌ ಡಿ ರೇವಣ್ಣರಣ್ಣ ಬುಧವಾರ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ರೇವಣ್ಣರನ್ನ ಮೇ 14ರವೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 17ನೇ ACMM ಕೋರ್ಟ್‌ ಆದೇಶ ನೀಡಿದೆ. ಹಾಗಾಗಿ ಎಚ್‌ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ವಿಚಾರಣೆ ಬಳಿಕ ಭಾವುಕರಾದ ರೇವಣ್ಣ ಕಣ್ಣೀರಿಡುತ್ತಾ ಕೋರ್ಟ್‌ನಿಂದ ಹೊರ ಬಂದ್ರು. ಅಲ್ಲದೆ ಇವರ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದ್ದು, ಒಂದು ವೇಳೆ ಜಾಮೀನು ಸಿಗದ್ದಿದ್ರೆ ಮೇ 14ರವರೆಗೆ ರೇವಣ್ಣ ಪರಪ್ಪನ ಅಗ್ರಹಾರದಲ್ಲೇ ಇರಬೇಕಾಗುತ್ತೆ. ಇನ್ನು ಪ್ರಜ್ವಲ್‌ ಹಾಗೂ ರೇವಣ್ಣರ ಕೇಸ್‌ಗಳ ವಿಚಾರಣೆ ನಡೆಸ್ತಿರೊ SIT ತಂಡ ಇದುವರೆಗೆ 9 ಮಂದಿ ಸಂತ್ರಸ್ಥೆಯರ ಹೇಳಿಕೆಗಳನ್ನ ದಾಖಲಿಸಿಕೊಂಡಿದೆ. ಈ ವೇಳೆ 2019ರಿಂದ 2021ರ ತನಕ ಅಂದ್ರೆ 3 ವರ್ಷಗಳ ಅವಧಿಯಲ್ಲಿ ಈ ಲೈಂಗಿಕ ದೌರ್ಜನ್ಯಗಳು ನಡೆದಿವೆ ಎನ್ನಲಾಗಿದೆ. ಅಲ್ದೇ ಮಹಿಳಾ ಅಧಿಕಾರಿಗಳಿಬ್ರು, ವರ್ಗಾವಣೆ ಆಮೀಷವೊಡ್ಡಿ ನಮ್ಮ ಮೇಲೆ ಪ್ರಜ್ವಲ್‌ ಅತ್ಯಾಚಾರವೆಸಗಿದ್ದಾರೆ ಅಂತೇಳಿ ಹೇಳಿಕೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಜ್ವಲ್‌ ವಿರುದ್ದ ಮತ್ತೆರಡು FIR ದಾಖಲಾಗೋ ಸಾಧ್ಯತೆ ಇದೆ ಅಂತೇಳಲಾಗ್ತಿದೆ. ಇನ್ನು ಈ ಕೇಸ್‌ ಸಂಬಂಧ ಪ್ರಜ್ವಲ್‌ರ ಮಾಜಿ ಕಾರು ಚಾಲಕ ಕಾರ್ತಿಕ್‌ ಬೆಂಗಳೂರಿನಲ್ಲೇ ಇದ್ದಾರೆ. ಅವ್ರನ್ನ ಡಿಸಿಎಂ ಡಿಕೆ ಶಿವಕುಮಾರ್‌ ರಕ್ಷಣೆ ಮಾಡ್ತಿದ್ದಾರೆ ಅಂತ ಮಾಜಿ ಸಿಎಂ HD ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಲ್ದೇ ಈ ಕೇಸ್‌ನಲ್ಲಿ ಪ್ರಜ್ವಲ್‌ ಹಾಗೂ ರೇವಣ್ಣ ಅವ್ರನ್ನ ಮಾತ್ರ ಯಾಕೆ ಟಾರ್ಗೆಟ್‌ ಮಾಡಲಾಗ್ತಿದೆ? ವಿಡಿಯೋ ಸೋರಿಕೆ ಮಾಡಿದವ್ರ ವಿರುದ್ದ ಕ್ರಮ ಕೈಗೊಳ್ಳಿ ಅಂತೇಳಿ ಮಹಿಳಾ ಆಯೋಗ ದೂರು ನೀಡಿತ್ತು. ಆದ್ರೂ ಅವರ ಮೇಲೆ ಯಾಕೆ ಕ್ರಮ ತಗೊಂಡಿಲ್ಲ? ಅಂತ, ಗೃಹಸಚಿವ ಜಿ ಪರಮೇಶ್ವರ್‌ ಉತ್ತರ ಕೊಡ್ಬೇಕು ಅಂತ ಎಚ್‌ಡಿಕೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply