ರಾಜ್ಯದಲ್ಲಿ ಇವತ್ತು ಎಲ್ಲೆಲ್ಲಿ ಮಳೆಯಾಯ್ತು? ಹವಾಮಾನ ಹೇಗಿದೆ?

masthmagaa.com:

ರಾಜ್ಯದ ಕೆಲವೊಂದುಕಡೆ ಇವತ್ತು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕೊತನೂರು ಎಂಬಲ್ಲಿ ಅತಿಹೆಚ್ಚು 63 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳ ಕೆಲವೊಂದುಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳ ಕೆಲವೊಂದು ಕಡೆ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಅತ್ತ ದಕ್ಷಿಣ ಥೈಲ್ಯಾಂಡ್​​ ಮತ್ತು ಅಂಡಮಾನ್​​ ನಿಕೋಬಾರ್​ ಸಮೀಪ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದೆ. ಇದು ಡಿಸೆಂಬರ್​ 2ರ ವೇಳೆಗೆ ‘ಜೋವದ್​’ ಚಂಡಮಾರುತವಾಗಿ ಬದಲಾಗಲಿದೆ. ನಂತ್ರ ಡಿಸೆಂಬರ್​ 4ರಂದು ಆಂಧ್ರ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತಕ್ಕೆ ಜೋವದ್ ಅಂತ ಹೆಸರಿಟ್ಟಿದ್ದು ಸೌದಿ ಅರೇಬಿಯಾ. ಮುಂದೆ ಯಾವುದಾದ್ರೂ ಸೈಕ್ಲೋನ್​​ ಬಂದ್ರೆ ಅದರ ಹೆಸರು ‘ಅಸನಿ’ ಅಂತ ಇರಲಿದೆ. ಈ ಹೆಸರನ್ನ ಶ್ರೀಲಂಕಾ ಇಟ್ಟಿರೋದು. ಅತ್ತ ಅರಬ್ಬಿ ಸಮುದ್ರದ ಮಹಾರಾಷ್ಟ್ರ ಕರಾವಳಿ ಸಮೀಪನೂ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗೋ ಸಾಧ್ಯತೆ ಇದೆ. ಇದರ ಪರಿಣಾಮ ನಾಳೆ, ನಾಡಿದ್ದು ಮಹಾರಾಷ್ಟ್ರ, ಗುಜರಾತ್​​ನಲ್ಲಿ ಮಳೆಯಾಗಲಿದೆ ಅಂತಾನೂ ಮುನ್ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply