224 ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳು! ಭದ್ರತೆಗೆ 1.56 ಲಕ್ಷ ಪೊಲೀಸರು ನಿಯೋಜನೆ!

masthmagaa.com:

ರಾಜ್ಯದಲ್ಲಿ ಪ್ರಜಾಫ್ರಭುತ್ವದ ಹಬ್ಬದ ಸಂಭ್ರಮ ಮನೆಮಾಡಿದೆ. ಹೊಸ ಸರ್ಕಾರ ಆಯ್ಕೆಗೆ ನಾಳೆ ರಾಜ್ಯಾದ್ಯಂತ ಮತದಾನ ನಡೆಯಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳಿದ್ದು, ಭದ್ರತೆಗಾಗಿ 1.56 ಲಕ್ಷ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ರಾಜ್ಯದ 84,119 ಪೊಲೀಸರ ಜೊತೆ ನೆರೆ ರಾಜ್ಯದ ಪೊಲೀಸರನ್ನ ಕರೆಸಿಕೊಳ್ಳಲಾಗಿದೆ. ಹೊರ ರಾಜ್ಯದಿಂದ 8,500 ಪೊಲೀಸರು, 650 CRPF ತುಕಡಿ, 304 DYSP, 991 ಇನ್ಸ್​​ಪೆಕ್ಟರ್ಸ್​, 2,610 ಪಿಎಸ್​ಐ, 108 ಬಿಎಸ್​ಎಫ್​, 75 CISF​, 70 ITBP, 35 RPF ಸಿಬ್ಬಂದಿಯನ್ನ​ ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಇನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಇತ್ತ ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 5 ಪಿಂಕ್‌ ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 140 ಪಿಂಕ್​​ ಬೂತ್​​ ನಿರ್ಮಾಣ ಮಾಡಲಾಗಿದೆ. ಇನ್ನು ಮತದಾನ ಮಾಡಿದ ಮತದಾರರ ಬೆರಳಿಗೆ ಹಾಕುವ ಇಂಕ್‌ನ್ನ ಎಂದಿನಂತೆ ಮೈಸೂರಿನಿಂದ ಪೂರೈಸಲಾಗಿದೆ. ಮೈಸೂರು ಪೇಂಟ್ಸ್‌ ಹಾಗೂ ವಾರ್ನಿಸ್‌ ಸಂಸ್ಥೆಯಿಂದ 1.2 ಲಕ್ಷ ಇಂಕ್‌ ಬಾಟಲಿಗಳನ್ನ ಪೂರೈಕೆ ಮಾಡಲಾಗಿದೆ ಅಂತ ಕಂಪನಿಯ ಎಂಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply