ರಾಜ್ಯದಲ್ಲಿ ಪ್ರತಿವರ್ಷ ಹೆಚ್ಚಾಗ್ತಿದೆ ಶಾಲೆ ಬಿಡೋ ವಿದ್ಯಾರ್ಥಿಗಳ ಸಂಖ್ಯೆ!

masthmagaa.com:

ಶಾಲೆ ತೊರೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲಿ ಕರ್ನಾಟಕ 7 ನೇ ಸ್ಥಾನದಲ್ಲಿದ್ದು, ಕಳೆದ 5 ವರ್ಷದಲ್ಲಿ 53 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದಾಗಿ ಸ್ಕೂಲ್ ಗೆ ಗುಡ್ ಬೈ ಹೇಳಿದ್ದಾರೆ ಅಂತ ತಿಳಿದು ಬಂದಿದೆ. ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದರೂ ಈ ರೀತಿ ಆಗ್ತಿರೋದು ಗಮನಾರ್ಹ ಸಂಗತಿಯಾಗಿದೆ. ಈ ಸಮಸ್ಯೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆಯಂತೆ. ಆ ಮೂಲಕ ಮುಖ್ಯವಾಹಿನಿಯ ಮಕ್ಕಳ ಟ್ರ್ಯಾಕಿಂಗ್‌ನ್ನ ಕ್ಲಸ್ಟರ್ ಮಟ್ಟದಿಂದ ಜಿಲ್ಲಾಮಟ್ಟದ ತಂಡಗಳವರೆಗೆ ಮೇಲ್ವಿಚಾರಣೆ ಮಾಡಿ ಯಾವುದೇ ಹಂತದಲ್ಲೂ ಮಕ್ಕಳು ಡ್ರಾಪ್ ಔಟ್ ಆಗದಿರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ಹೇಳಿದೆ. ಅಂದ್ಹಾಗೆ ಕೋವಿಡ್ ಸಂಕಷ್ಟ ಎದುರಾದ ಬಳಿಕವಂತೂ ಬಹಳ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗಳ ಕಡೆ ಮುಖ ಮಾಡಿಲ್ಲ. ತೀವ್ರ ಬಡತನ ಸಹ ಈ ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply