ಮಹಿಳೆಯರ ಉಚಿತ ಬಸ್‌ ಪ್ರಯಾಣದ 8 ದಿನದ ಟಿಕೆಟ್‌ ಮೊತ್ತ 84 ಕೋಟಿ ರೂಪಾಯಿ!

masthmagaa.com:

ಕಾಂಗ್ರೆಸ್‌ನ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜೂನ್ 11 ರಂದು ಪ್ರಾರಂಭವಾದ ನಂತರದ ಮೊದಲ ಎಂಟು ದಿನಗಳಲ್ಲಿ ಎಷ್ಟು ಜನ ಇದರ ಉಪಯೋಗ ಪಡೆದಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಪ್ರತಿದಿನ ಅಂದಾಜು 50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಬಸ್ ಸೇವೆಯನ್ನು ಬಳಸುತ್ತಿದ್ದಾರೆ ಮತ್ತು ಜೂನ್ 18 ರವರೆಗೆ 3.6 ಕೋಟಿಗೂ ಹೆಚ್ಚು ಪ್ರಯೋಜನ ಪಡೆದಿದ್ದಾರೆ. ಜೂನ್‌ 11ರಂದು ಈ ಯೋಜನೆ ಜಾರಿಯಾದ ಮಾರನೇ ದಿನ ಸುಮಾರು 41.3 ಲಕ್ಷ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ನಡೆಸಿದ್ದಾರೆ. ಅಧಿಕೃತ ಮಾಹಿತಿ ಪ್ರಕಾರ, ಯೋಜನೆಯ ಮೊದಲ ದಿನ ಸುಮಾರು 41.2 ಲಕ್ಷ ಮಹಿಳೆಯರು ಪ್ರಯಾಣ ನಡೆಸಿದ್ದಾರೆ ಅಂತ ಅಂದಾಜಿಸಲಾಗಿದೆ. ಇದು ಎರಡನೇ ದಿನ 41.3 ಲಕ್ಷ ಮಹಿಳೆಯರು ಉಚಿತ ಸೇವೆಯನ್ನು ಬಳಸಿದ್ದಾರೆ. ಆದ್ರೆ ಜೂನ್ 16 ರಂದು ದೈನಂದಿನ ಅಂಕಿ ಏರಿಕೆಯಾಗಿದ್ದು, 55 ಲಕ್ಷ ಜನರು ಫ್ರೀ ಬಸ್‌ ಪ್ರಯಾಣವನ್ನು ಮಾಡಿದ್ದಾರೆ. ಇನ್ನು ಮೊದಲ 8 ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಸುಮಾರು 84.3 ಕೋಟಿ ರೂಪಾಯಿ ಆಗಿದೆ ಅಂತ ತಿಳಿದು ಬಂದಿದೆ. ಇತ್ತ ಇದುವರೆಗೆ ಸುಮಾರು 3 ಕೋಟಿಗೂ ಅಧಿಕ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಧರ್ಮಸ್ಥಳ ಸೇರಿ ರಾಜ್ಯದ ಪ್ರವಾಸಿ ಹಾಗೂ ಪುಣ್ಯ ಕ್ಷೇತ್ರಗಳಿಗೆ ಪ್ರಯಾಣಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply