ಕೃಷಿ ಭೂಮಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ: ಸಚಿವ ಅಶೋಕ್

masthmagaa.com:

ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಲು ಅವಕಾಶ ನೀಡುವ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸ್ತಿದ್ದೀವಿ ಅಂತ ರಾಜ್ಯ ಸರ್ಕಾರ ತಿಳಿಸಿದೆ. ಈ ಬಗ್ಗೆ ಮಾತನಾಡಿರೋ ಕಂದಾಯ ಸಚಿವ ಆರ್ ಅಶೋಕ್​, ಇನ್ಮುಂದೆ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಮೂರೇ ದಿನಗಳಲ್ಲಿ ಅನುಮತಿ ಸಿಗಲಿದೆ. ಕರ್ನಾಟಕ ಭೂಕಂದಾಯ ಕಾಯ್ದೆಯ ಸೆಕ್ಷನ್ 95ರಲ್ಲಿ ಬದಲಾವಣೆ ತಂದು, ಭೂಮಿಯ ಕನ್ವರ್ಷನ್​​​ ಸುಲಭ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಹಿಂದೆ ಈ ರೀತಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಬೇಕಾದ್ರೆ ಕೆಲವೊಂದು ಕಟ್ಟುಪಾಡುಗಳಿದ್ವು. ಅರ್ಜಿ ಹಲವು ಇಲಾಖೆಗಳನ್ನು ದಾಟಿ ಅನುಮತಿ ಪಡೆಯಬೇಕಾಗಿತ್ತು. ಈ ಪ್ರಕ್ರಿಯೆಗೆ ಬೆಂಗಳೂರಲ್ಲಿ 6ರಿಂದ 8 ತಿಂಗಳು ಮತ್ತು ಬೇರೆ ಪ್ರದೇಶಗಳಲ್ಲಿ ವರ್ಷಕ್ಕಿಂತಲೂ ಹೆಚ್ಚು ದಿನಗಳು ಬೇಕಾಗ್ತಿದ್ವು.. ಆದ್ರೀಗ ತರಲು ಹೊರಟಿರೋ ತಿದ್ದುಪಡಿಯಿಂದ ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಅಂತ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply