NEP ರದ್ದುಗೊಳಿಸದಂತೆ ಸಲಹೆ ನೀಡಿದ ವಿಶ್ವವಿದ್ಯಾಲಯಗಳ ಉಪಕುಲಪತಿಗಳು!

masthmagaa.com:

ಕರ್ನಾಟಕದ ಎಲ್ಲಾ 30 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ (NEP) 2020’ ಅನ್ನ ರದ್ದುಗೊಳಿಸದೆ ಮುಂದುವರಿಸೋದು ಸೂಕ್ತ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಂತ ತಿಳಿದು ಬಂದಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವ್ರು ಉಪಕುಲಪತಿಗಳ ಜತೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ NEP ಅನುಕೂಲತೆಗಳ ಕುರಿತು ಸಚಿವರು ಉಪಕುಲಪತಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. NEP ಅನುಕೂಲಗಳು ಮತ್ತು ಅನಾನುಕೂಲಗಳನ್ನ ಪರಿಗಣಿಸಿದ ನಂತರ, ಉಪಕುಲಪತಿಗಳ ಒಟ್ಟಾರೆ ಅಭಿಪ್ರಾಯ ನೀತಿಯನ್ನು ಮುಂದುವರೆಸುವ ಪರವಾಗಿ ಇತ್ತು. ಅಲ್ದೆ ಈ ನೀತಿಯನ್ನ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ರಾಜ್ಯದ ವಿಶ್ವವಿದ್ಯಾಲಯಗಳ ವಿವಿಧ ಹಂತಗಳಲ್ಲಿ ಅದರ ಅನುಷ್ಠಾನದಲ್ಲಿ ಈಗಾಗಲೇ ಎರಡು ವರ್ಷ ಮುಂದಿವೆ ಅಂತ ಉಪಕುಲಪತಿಗಳು ತಿಳಿಸಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply