ಕರ್ನಾಟಕ ಅನ್​ಲಾಕ್​​​ 1.0…ಯಾವೆಲ್ಲಾ ಕ್ಷೇತ್ರಗಳಿಗೆ ರಿಲೀಫ್​​..?

masthmagaa.com:

ಜೂನ್ 14ರ ಬಳಿಕ ರಾಜ್ಯದಲ್ಲಿ ಕೊರೋನಾ ಲಾಕ್​ಡೌನ್ ಮುಂದುವರಿಯುತ್ತಾ ಅಥವಾ ಕೊನೆಯಾಗುತ್ತಾ ಅನ್ನೋ ಗೊಂದಲಕ್ಕೆ ಇವತ್ತು ಸಿಎಂ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಪಾಸಿಟಿವಿಟಿ ದರ ಜಾಸ್ತಿ ಇರುವ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಲಾಕ್​ಡೌನ್ 21ನೇ ತಾರೀಕು ಬೆಳಗೆ 6 ಗಂಟೆವರೆಗೆ ಮುಂದುವರಿಯಲಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಕೆಲವೊಂದು ವಿನಾಯ್ತಿಗಳನ್ನು ನೀಡಲಾಗುತ್ತೆ ಅಂತ ಯಡಿಯೂರಪ್ಪ ಘೋಷಿಸಿದ್ದಾರೆ. ಹಾಗಾದ್ರೆ ಯಾವೆಲ್ಲಾ ವಿನಾಯಿತಿ ಇರುತ್ತೆ ಅಂತ ನೋಡೋದಾದ್ರೆ,

ಕರ್ನಾಟಕ ಅನ್​ಲಾಕ್​​​ 1.0
ಕಾರ್ಖಾನೆಗಳಲ್ಲಿ ಶೇ.50ರಷ್ಟು ಕಾರ್ಮಿಕರೊಂದಿಗೆ ಕೆಲಸ
ಗಾರ್ಮೆಂಟ್​​ಗಳಲ್ಲಿ ಶೇ.30ರಷ್ಟು ಕಾರ್ಮಿಕರೊಂದಿಗೆ ಕೆಲಸ
ಆಟೋ, ಟ್ಯಾಕ್ಸಿಯಲ್ಲಿ ಒಮ್ಮೆಗೆ ಇಬ್ಬರ ಪ್ರಯಾಣಕ್ಕೆ ಅವಕಾಶ
ಮಧ್ಯಾಹ್ನ 2ರವರೆಗೆ ಅಗತ್ಯ ಸಾಮಾಗ್ರಿ ಇರುತ್ತೆ, ಮದ್ಯ ಪಾರ್ಸೆಲ್​​​ಗೆ ಅವಕಾಶ
ನಿರ್ಮಾಣ ಕಾರ್ಯ, ಸಿಮೆಂಟ್, ಸ್ಟೀಲ್ ಅಂಗಡಿಗಳಿಗೆ ಅವಕಾಶ
ಬೆಳಗ್ಗೆ 5ರಿಂದ 10ರವರೆಗೆ ಪಾರ್ಕ್​​​ ತೆರೆಯಲು ಅವಕಾಶ
ಪ್ರೈವೇಟ್, ಬಿಎಂಟಿಸಿ, ಕೆಎಸ್​​​ಆರ್​​ಟಿಸಿ ಬಸ್​​​ ಓಡಾಟಕ್ಕೆ ಅವಕಾಶ ಇಲ್ಲ
ಸಂಜೆ 7ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್​ ಕರ್ಫ್ಯೂ
ಶುಕ್ರವಾರ ಸಂಜೆ ಸೋಮವಾರ ಬೆಳಗ್ಗೆ 6ರವರೆಗೆ ವೀಕೆಂಡ್ ಕರ್ಫ್ಯೂ

-masthmagaa.com

Contact Us for Advertisement

Leave a Reply