ಸೈಬರ್‌ಕ್ರೈಂ ರಾಜಧಾನಿಯಾಗುತ್ತಿರುವ ಬೆಂಗಳೂರು?

masthmagaa.com:

ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು ಈಗ ಸೈಬರ್‌ ವಂಚನೆಗಳ ಕೇಂದ್ರವಾಗ್ತಿದೆ ಅನ್ನೋ ವರದಿ ಬಂದಿದೆ. ಆನ್‌ಲೈನ್ ಉದ್ಯೋಗ, ಸುಲಿಗೆ, ಬಿಟ್‌ಕಾಯಿನ್ ವಂಚನೆಗಳಲ್ಲಿ ನಗರದ ಜನರು ಪ್ರತಿದಿನ ಸರಾಸರಿ 1.71 ಕೋಟಿ ರೂ. ಕಳ್ಕೋತಿದಾರೆ ಅಂತ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕಳೆದು 9 ತಿಂಗಳಲ್ಲಿ ಕೇವಲ ಬೆಂಗಳೂರು ನಗರದಲ್ಲಿ ಬರೋಬ್ಬರಿ 12,615 ಸೈಬರ್ ಪ್ರಕರಣಗಳು ದಾಖಲಾಗಿವೆ. ಅದ್ರಲ್ಲೂ ಹೆಚ್ಚಾಗಿ ಆನ್‌ಲೈನ್‌ ಉದ್ಯೋಗದ ಪ್ರಕರಣಗಳು. ಒಟ್ಟಾರೆಯಾಗಿ ವಂಚನೆಯಾಗಿರೋದು ಆಲ್‌ಮೋಸ್ಟ್‌ 470 ಕೋಟಿ ರೂಪಾಯಿ. ಈ ಪೈಕಿ 201 ಕೋಟಿ ರೂಪಾಯಿ ಹಣವನ್ನ ಅಬಾರ್ಟ್‌ ಮಾಡಲಾಗಿದೆ ಅಥ್ವಾ ಸ್ಥಗಿತಗೊಳಿಸಲಾಗಿದೆ. ಕೇವಲ 28.4 ಕೋಟಿಗಳನ್ನಷ್ಟೇ ಪೊಲೀಸರು ರಿಕವರ್‌ ಮಾಡಲು ಸಾಧ್ಯವಾಗಿದೆ. ಇನ್ನು ಆನ್‌ಲೈನ್‌ ಉದ್ಯೋಗದ ವಿಚಾರಕ್ಕೆ ಬಂದ್ರೆ ವಂಚನೆಯಾಗಿರೋ 204 ಕೋಟಿ ರೂಪಾಯಿಗಳಲ್ಲಿ 73 ಕೋಟಿ ಫ್ರೀಜ಼್ ಆಗಿ ಕೇವಲ 7 ಕೋಟಿಯಷ್ಟೇ ಪೊಲೀಸರ ಕೈ ಸೇರಿದೆ. ಸಿಕ್ಕಿರುವ ಬಹುತೇಕ ಹಣವನ್ನು ವಂಚಿತರಿಗೆ ಹಿಂದಿರುಗಿಸಲಾಗಿದೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ. ಇದೇ ವೇಳೆ ಲೋನ್ ಆ್ಯಪ್‌ಗಳು, ಬಿಟ್‌ಕಾಯಿನ್ ಮತ್ತು 84 ಸೆಕ್ಸ್‌ಟಾರ್ಶನ್ (ಖಾಸಗಿ ಫೋಟೋಗಳನ್ನಿಟ್ಟು ಬ್ಲ್ಯಾಕ್ ಮೇಲ್)ಗೆ ಸಂಬಂದಿಸಿದ 450ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಸಂತ್ರಸ್ತರು ಒಟ್ಟು 24.62 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಅಂತ ವರದಿಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply