ಟೀಮ್‌ ಇಂಡಿಯಾಗೆ ಮೋದಿ ಸಾಂತ್ವನ! ವಿಡಿಯೋ ವೈರಲ್‌!

masthmagaa.com:

ವಿಶ್ವಕಪ್‌ ಫೈನಲ್‌ನಲ್ಲಿ ಸೋತ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಟೀಮ್‌ ಇಂಡಿಯಾ ಡ್ರೆಸಿಂಗ್‌ ರೂಮ್‌ಗೆ ಭೇಟಿ ಕೊಟ್ಟಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿನ್ನೆಯಷ್ಟೆ ಈ ವಿಚಾರವನ್ನ ಮೊಹಮದ್‌ ಶಮಿ, ರವೀಂದ್ರ ಜಡೇಜಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಇದೀಗ ಸ್ವತಃ ಮೋದಿ ಹಾಗೂ ಹಲವು ಬಿಜೆಪಿ ಸಚಿವರು ಮೋದಿ ಭೇಟಿಯ ವೀಡಿಯೋ ಅಪ್ಲೋಡ್‌ ಮಾಡಿದ್ದು, ಫುಲ್‌ ವೈರಲ್ಲಾಗಿದೆ. ಅದ್ರಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಟೀಮ್‌ ಇಂಡಿಯಾ ಆಟಗಾರರು, ಕೋಚ್‌ಗಳನ್ನು ಮಾತಾಡಿಸಿ ಸಾಂತ್ವನ ಹೇಳಿದ್ದಾರೆ. ರೋಹಿತ್‌, ವಿರಾಟ್‌ರ ಕೈ ಹಿಡಿದು ಮೋದಿ ಚಿಯರ್‌-ಅಪ್‌ ಮಾಡಿದ್ದಾರೆ. ಜೊತೆಗೆ ಇಂತದ್ದೆಲ್ಲಾ ಆಗ್ತಾನೆ ಇರುತ್ವೆ ಅಂತೇಳಿ ಎಲ್ಲರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಕೋಚ್‌ ರಾಹುಲ್‌ ದ್ರಾವಿಡ್ ಜೊತೆಗೆ, ನೀವು ಮಾಡುವ ಪ್ರಯತ್ನ ಮಾಡಿದ್ದೀರಿ, ಕಷ್ಟ ಪಟ್ಟಿದ್ದೀರಿ ಅಂದಿದ್ದಾರೆ. ಅಲ್ಲದೆ ದೆಹಲಿ ಬಂದ್ಮೇಲೆ ತಮ್ಮನ್ನ ಭೇಟಿ ಮಾಡಿ ಅಂತ ಹೇಳಿದ್ದಾರೆ. ಇತ್ತ ಮೋದಿ ಡ್ರೆಸಿಂಗ್‌ ರೂಂ ವಿಸಿಟ್‌ ಬಗ್ಗೆ ವಿಪಕ್ಷಗಳು ಟೀಕಾಪ್ರಹಾರ ಮಾಡಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಜಸ್ತಾನದ ರ್ಯಾಲಿ ಒಂದ್ರಲ್ಲಿ ಮಾತನಾಡ್ತ, ʻನಮ್ಮ ಹುಡುಗರು ಕಪ್‌ ಗೆದ್ದು ಬರ್ತಿದ್ರು. ಆದ್ರೆ ಸ್ಟೇಡಿಯಮ್‌ಗೆ ಕೆಟ್ಟ ಶಕುನ ಒಂದು ಎಂಟ್ರಿ ಕೊಟ್ಟು ಸೋಲಿಸ್ಬಿಡ್ತು ಅಂದ್ರೆ ಮೋದಿ ಬಂದಿದ್ಕೆನೆ ಇಂಡಿಯಾ ಸೋತಿದ್ದು ಅಂತ ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹೇಳಿಕೆಯನ್ನ ಬಿಜೆಪಿ ಖಂಡಿಸಿದ್ದು, ರಾಹುಲ್‌ ಗಾಂಧಿ ಕ್ಷಮೆ ಕೇಳ್ಬೇಕು ಅಂತ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್‌ ಆಗ್ರಹಿಸಿದ್ದಾರೆ. ಅತ್ತ ಶಿವಸೇನೆ ನಾಯಕಿ ಪ್ರಿಯಾಂಕ ಚತುರ್ವೇದಿ, ಟೀಂ ಇಂಡಿಯಾ ಸೋಲಿನ ಜೊತೆಗೆ ಮೋದಿ ಜೊತೆಗೆ ಹೋಗೋ ಕ್ಯಾಮರಾವನ್ನು ಫೇಸ್ ಮಾಡ್ಬೇಕಿದೆ ಅಂದಿದ್ದಾರೆ. ಇತ್ತ TMC ನಾಯಕ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ “ಡ್ರೆಸಿಂಗ್‌ ಕೊಠಡಿ ತಂಡಕ್ಕೆ ಮಾತ್ರ ಸೀಮಿತವಾಗಿರತ್ತೆ. ಮೋದಿ ಆಟಗಾರರನ್ನ ಮೀಟ್‌ ಮಾಡ್ಬೇಕಿದ್ರೆ ವಿಸಿಟರ್ಸ್‌ ಏರಿಯಾದಲ್ಲಿ ಮೀಟ್‌ ಮಾಡ್ಬೇಕಿತ್ತು. ಮೋದಿ ತಮ್ಮ ಬೆಂಬಲಿಗರನ್ನ ತಮ್ಮ ಬೆಡ್‌ ರೂಂ, ಡ್ರೆಸಿಂಗ್‌ ರೂಂಗೆ ಬರೋಕೆ ಬಿಡ್ತಾರ?” ಅಂದಿದ್ದಾರೆ.

-masthmagaa.com

Contact Us for Advertisement

Leave a Reply