ಕೇರಳದಲ್ಲಿ ಕೊರೋನಾ ಅಟ್ಟಹಾಸ! ಒಂದೇ ದಿನ 22 ಸಾವಿರ ಕೇಸ್

masthmagaa.com:

ಪಕ್ಕದ ರಾಜ್ಯ ಕೇರಳದಲ್ಲಿ ಕೊರೋನಾ ಕಡಿಮೆಯಾಗೋ ಲಕ್ಷಣವೇ ಕಾಣ್ತಿಲ್ಲ. ಕಳೆದ 24 ಗಂಟೆಗಳಲ್ಲಿ 22 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಈ ವಾರ ಕೂಡ ವೀಕೆಂಡ್ ಲಾಕ್​ಡೌನ್ ವಿಸ್ತರಣೆ ಮಾಡಿದೆ. ಈ ನಡುವೆ ಕೇರಳಕ್ಕೆ ನ್ಯಾಷನಲ್ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್​​ನ 6 ಮಂದಿ ತಜ್ಞರ ತಂಡವನ್ನು ಕಳುಹಿಸೋದಾಗಿ ಕೇಂದ್ರ ಆರೋಗ್ಯ ಸಚಿವ ಮನ್​​ಸುಖ್ ಮಾಂಡವೀಯ ಟ್ವೀಟ್ ಮಾಡಿ ತಿಳಿಸಿದ್ದಾರೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 37 ಪರ್ಸೆಂಟ್ ಕೇರಳದಲ್ಲೇ ಇದ್ದು, ಪಾಸಿಟಿವಿಟಿ ದರ 12.93 ಪರ್ಸೆಂಟ್​​ನಷ್ಟಿದೆ.

-masthmagaa.com

Contact Us for Advertisement

Leave a Reply